ನವದೆಹಲಿ: ದೇಶವೇ ಕಾಯುತ್ತಿದ್ದ ದಿನ ಬಂದೇಬಿಟ್ಟಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿ ನಿರ್ಧರಿಸುವ ಮಹತ್ತರ ದಿನ ಇಂದು. ಮತಎಣಿಕೆ ಕಾರ್ಯ ಆರಂಭಕ್ಕೆ ಇನ್ನು ಒಂದು ಗಂಟೆ ಬಾಕಿ ಇದ್ದು, ಪ್ರಮುಖ ಸಾಮಾಜಿಕ ಜಾಲತಾಣ ಟ್ವಿಟರ್ ಅದಾಗಲೇ ಫಲಿತಾಂಶದ ಕುರಿತಂತೆ ಪ್ರತಿಕ್ರಿಯಿಸಲು ಆರಂಭಿಸಿದೆ.
ಟ್ವಿಟರ್ ಟ್ರೆಂಡ್ನಲ್ಲಿ ಮೊದಲಿಗೆ #ElectionResults2019 ಎನ್ನುವುದು ಇದ್ದು ನಂತರದಲ್ಲಿ #Verdict2019 ಎನ್ನುವ ಹ್ಯಾಶ್ಟ್ಯಾಗ್ ಹೆಚ್ಚಾಗಿ ಬಳಕೆಯಾಗಿದೆ.
#आ_रही_है_कांग्रेस ಎನ್ನುವ ಹಿಂದಿ ಹ್ಯಾಶ್ಟ್ಯಾಗ್ ಮೂರನೇ ಸ್ಥಾನದಲ್ಲಿದೆ. ವಿಶೇಷವೆಂದರೆ #GobackModi ಎನ್ನುವ ಟ್ರೆಂಡ್ ಸದ್ಯ ಅಚ್ಚರಿಗೆ ಕಾರಣವಾಗಿದೆ. ಸದ್ಯ ಇದು ಭಾರತದಲ್ಲಿ ಟ್ರೆಂಡ್ ಆಗುತ್ತಿರುವ ಹ್ಯಾಶ್ಟ್ಯಾಗ್ಗಳಾಗಿವೆ.
ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು ಸಂಜೆ ವೇಳೆಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಎಕ್ಸಿಟ್ ಪೋಲ್ಗಳು ಎನ್ಡಿಎ ಪರವಾಗಿ ಭವಿಷ್ಯ ನುಡಿದಿದ್ದರೂ ನಿಜವಾದ ಫಲಿತಾಂಶದ ಮೇಲೆ ದೇಶದ ಜನತೆ ಕುತೂಹಲದ ಕಣ್ಣು ನೆಟ್ಟಿದ್ದಾರೆ.