ಇನ್ನು ದರ್ಶನ್ ಫೆಬ್ರವರಿ 16 ರಂದು ಕೇಕ್ ಕಟ್ ಮಾಡದೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ವಿಜೃಂಭಣೆಯ ಬರ್ತಡೇ ಅಲ್ಲದಿದ್ದರೂ ದಾಸನ ಅಭಿಮಾನಿಗಳು ಮಾತ್ರ ಅವರಿಗೆ ಉಡುಗೊರೆಯ ಸುರಿಮಳೆಯನ್ನೇ ಹರಿಸಿದ್ದರು. ಅಭಿಮಾನಿಯೊಬ್ಬ ಬೆನ್ನಿನ ಮೇಲೆ ದೊಡ್ಡದಾಗಿ ದರ್ಶನ್ ಟ್ಯಾಟೂ ಹಾಕಿಸಿಕೊಂಡಿದ್ದರು. ಇದೀಗ ಮತ್ತೊಬ್ಬ ಅಭಿಮಾನಿ ಒಂದೇ ಫ್ರೇಮ್ನಲ್ಲಿ ತೂಗುದೀಪ್ ಶ್ರೀನಿವಾಸ್, ದರ್ಶನ್ ಹಾಗೂ ಅವರ ಪುತ್ರ ವಿನೀಶ್ ಇರುವ ಚಿತ್ರವನ್ನು ಪೆನ್ಸಿಲ್ನಿಂದ ಬಿಡಿಸಿದ್ದಾರೆ.
ಈ ಪೋಟೋ ವಿಶೇಷ ಎಂದರೆ ತೂಗುದೀಪ್ ಶ್ರೀನಿವಾಸ್ ದೊಡ್ಡ ಕುರ್ಚಿಯಲ್ಲಿ ಕುಳಿತು ಬಲಭಾಗ ನಿಂತಿರುವ ಮೊಮ್ಮಗ ವಿನೀಶ್ ಹೆಗಲ ಮೇಲೆ ಕೈ ಹಾಕಿದ್ದಾರೆ. ಎಡಭಾಗದಲ್ಲಿ ದರ್ಶನ್ ವಿರಾಜಮಾನರಾಗಿ ನಿಂತಿದ್ದಾರೆ. ಸದ್ಯಕ್ಕೆ ಈ ಸ್ಕೆಚ್ ದರ್ಶನ್ ಅಭಿಮಾನಿಗಳ ಫೇಸ್ಬುಕ್ ಹಾಗೂ ವಾಟ್ಸಾಪ್ ಸ್ಟೇಟಸ್ನಲ್ಲಿ ವಿಜೃಂಭಿಸುತ್ತಿದೆ.
Intro:Body:
1971 ರ ಬಳಿಕ ಅಂತಾರಾಷ್ಟ್ರೀಯ ಗಡಿರೇಖೆ ದಾಟಿದ ವಾಯುಪಡೆ...!!
kannada newspaper, kannada news, etv bharat, Surgical strikes 2, IAF crosses LoC, first time, since 1971 war, 1971,ಕ ಅಂತಾರಾಷ್ಟ್ರೀಯ, ಗಡಿರೇಖೆ ದಾಟಿದ, ವಾಯುಪಡೆ,
Surgical strikes 2: IAF crosses LoC for the first time since 1971 war
ನವದೆಹಲಿ: 1971 ರ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ವಾಯುಪಡೆ ತಾನಾಗೇ ಅಂತಾರಾಷ್ಟ್ರೀಯ ಗಡಿ ರೇಖೆ ಉಲ್ಲಂಘನೆ ಮಾಡಿ ಪಾಕ್ ನೆಲದಲ್ಲಿ ಕಾರ್ಯಾಚರಣೆ ಮಾಡಿರುವುದು ವಿಶೇಷ. ಈ ಹಿಂದೆ 1971 ರಲ್ಲಿ ಇಂಡಿಯನ್ ಏರ್ಫೋರ್ಸ್ ಗಡಿನಿಯಂತ್ರಣ ರೇಖೆಯನ್ನ ದಾಟಿ, ಗಡಿಗುಂಟ ದಾಳಿ ಕೈಗೊಂಡಿತ್ತು.
ಸರಿ ಸುಮಾರು 45 ವರ್ಷಗಳ ಬಳಿಕ ಭಾರತೀಯ ವಾಯುಪಡೆ ಇದೇ ಮೊದಲ ಬಾರಿಗೆ ಸರ್ಜಿಕಲ್ ಸ್ಟ್ರೈಕ್ ಪಾರ್ಟ್ - 2 ದಲ್ಲಿ ಪಾಲ್ಗೊಂಡು ಪ್ರಮುಖವಾಗಿ ಜೈಷೆ ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್, ಲಷ್ಕರ್ ಉಗ್ರರ ಕ್ಯಾಂಪ್ಗಳ ಮೇಲೆ ದಾಳಿ ಕೈಗೊಂಡಿದೆ.
ಮಂಗಳವಾರ ತಡರಾತ್ರಿ 3 ಗಂಟೆ 30 ನಿಮಿಷಕ್ಕೆ ಭಾರತೀಯ ವಾಯುಪಡೆ ಪಾಕ್ ಉಗ್ರರ ಅಡಗು ತಾಣಗಳನ್ನ ಗುರುತಿಸಿ ಸುಮಾರು ಸಾವಿರ ಕೆ.ಜಿಯಷ್ಟು ತೂಕದ ಬಾಂಬ್ಗಳನ್ನ ಎಸೆದು ದಾಳಿ ನಡೆಸಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನ ಹೊಡೆದುರುಳಿಸಿದೆ.
ಬಾಲಕೋಟ್, ಮುಜಾಫರಾಬಾದ್ ಮತ್ತು ಚಕೋಠಿಗಳಲ್ಲಿ ಇದ್ದ ಉಗ್ರರ ಕ್ಯಾಂಪ್ಗಳನ್ನ ಭಾರತೀಯ ಸೇನೆ ಧ್ವಂಸಗೊಳಿಸಿದೆ. ಈ ಸುದ್ದಿಯನ್ನ ಪಾಕಿಸ್ತಾನ ಸೇನೆಯೇ ಒಪ್ಪಿಕೊಂಡಿದೆ. ಭಾರತದ ವಾಯುಪಡೆ ಗಡಿನಿಯಂತ್ರಣ ರೇಖೆಯನ್ನ ಉಲ್ಲಂಘಿಸಿ ಪಾಕ್ ನೆಲ ಪ್ರವೇಶಿಸಿದೆ ಎಂದು ಆರೋಪಿಸಿದೆ.
ಈ ಮಧ್ಯೆ ಇದೇ ಮೊದಲ ಬಾರಿ ಎಂಬಂತೆ ಭಾರತೀಯ ವಾಯುಪಡೆ ಪಾಕ್ ಆಕ್ರಮಿತ ಕಾಶ್ಮೀರ ಅಷ್ಟೇ ಅಲ್ಲ, ಪಾಕಿಸ್ತಾನದ ನೆಲದಲ್ಲೂ ನುಗ್ಗಿ ಉಗ್ರರ ಕ್ಯಾಂಪ್ಗಳನ್ನ ಧ್ವಂಸ ಮಾಡಿ ಗಮನ ಸೆಳೆದಿದೆ. ಅಷ್ಟೇ ಅಲ್ಲ, ನಮ್ಮ ಮೇಲೆ ದಾಳಿ ಮಾಡಿದರೆ ಪ್ರತೀಕಾರ ತೆಗೆದುಕೊಳ್ಳದೇ ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನ ಭಾರತೀಯ ಸೇನೆ ಹಾಗೂ ಸರ್ಕಾರ ನೀಡಿದೆ.
ಈ ನಡುವೆ ಭಾರತ ಸೇನೆ ಅಂತಾರಾಷ್ಟ್ರೀಯ ಗಡಿಗುಂಟ ಕಟ್ಟೆಚ್ಚರ ವಹಿಸಿದ್ದು, ಜಾಮನಗರ, ಮಾಲಿಯಾ, ಅಹಮದಾಬಾದ್ ಮತ್ತು ವಡೋದರಾ ವಾಯುನೆಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಯಾವುದೇ ಪರಿಸ್ಥಿತಿಯನ್ನ ಎದುರಿಸಲು ಸೇನೆ ಸರ್ವ ಸನ್ನದ್ಧವಾಗಿದೆ.
Conclusion: