ನವದೆಹಲಿ: ಟಿಕ್ಟಾಕ್ ವಿಡಿಯೊ ಆ್ಯಪ್ ಅನ್ನು ನಿಷೇಧಿಸುವಂತೆ ಮದ್ರಾಸ್ ಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್ ಏಪ್ರಿಲ್ 15ರಂದು ವಿಚಾರಣೆ ನಡೆಸಲಿದೆ.
ಚೀನಾ ಮೂಲದ ಟಿಕ್ಟಾಕ್ ಆ್ಯಪ್ನಲ್ಲಿ ಅಶ್ಲೀಲತೆಯನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಿ ವಕೀಲರೊಬ್ಬರು ಸಲ್ಲಿಸಿದ್ದ ದೂರನ್ನು ಪರಿಶೀಲಿಸಿ ಆ್ಯಪ್ ನಿಷೇಧಿಸುವಂತೆ ಮದ್ರಾಸ್ ಹೈ ಕೋರ್ಟ್ ಈಚೆಗೆ ಆದೇಶ ಹೊರಡಿಸಿತ್ತು.
ಈ ಸಂಬಂಧ ಸುಪ್ರೀಂ ಕದವನ್ನೂ ತಟ್ಟಲಾಗಿದ್ದು, ತ್ವರಿತವಾಗಿ ವಿಚಾರಣೆ ಕೈಗೆತ್ತಿಕೊಳ್ಳುವುದು ಅಸಾಧ್ಯ ಎಂದು ಕೋರ್ಟ್ ಹೇಳಿತ್ತು. ಧರ್ಮ ನಿಂದನೆ, ಅಶ್ಲೀಲತೆ ಹಾಗೂ ಇನ್ನಿತರ ಕಾನೂನು ಬಾಹಿರ ವಿಷಯಗಳನ್ನು ಈ ಆ್ಯಪ್ನಲ್ಲಿರುವ ವಿಡಿಯೊಗಳು ಒಳಗೊಂಡಿವೆ ಎಂದು ಆರೋಪಿಸಲಾಗಿದೆ.