ನವದೆಹಲಿ: ಜನಪ್ರಿಯ ವಿಡಿಯೋ ಆ್ಯಪ್ ಟಿಕ್ಟಾಕ್ ನಿಷೇಧದ ಭೀತಿ ಎದುರಿಸುತ್ತಿರುವ ಮಧ್ಯೆಯೇ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಗೂಗಲ್ ಹಾಗೂ ಆ್ಯಪಲ್ ಸಂಸ್ಥೆಗಳಿಗೆ ಚೀನೀ ಮೂಲದ ಆ್ಯಪ್ ತೆಗೆಯುವಂತೆ ಆದೇಶ ನೀಡಿದೆ.
ವ್ಯಕ್ತಿಯ ಖಾಸಗಿತನದ ಹರಣ ಕಾರಣವನ್ನಾಗಿರಿಸಿ ಟಿಕ್ಟಾಕ್ ಆ್ಯಪ್ ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್, ಆ್ಯಪ್ ನಿಷೇಧಿಸುವಂತೆ ಕೇಂದ್ರಕ್ಕೆ ಸೂಚಿಸಿತ್ತು. ನಂತರ ಈ ವಿಚಾರ ಸುಪ್ರೀಂ ಮೆಟ್ಟಿಲೇರಿತ್ತು.
ಸದ್ಯ ಸುಪ್ರೀಂ ಅಂಗಳದಲ್ಲಿದ್ದು ಏಪ್ರಿಲ್ 22ರಂದು ವಿಚಾರಣೆಗೆ ಬರಲಿದೆ. ಸುಪ್ರೀಂ ತೀರ್ಪಿಗೂ ಮುನ್ನವೇ ಎಚ್ಚೆತ್ತಿರುವ ಕೇಂದ್ರ, ಆ್ಯಪ್ ತೆಗೆದು ಹಾಕುವಂತೆ ಗೂಗಲ್ ಹಾಗೂ ಆ್ಯಪಲ್ ಸಂಸ್ಥೆಗಳಿಗೆ ಆದೇಶಿಸಿದೆ.