ವಿಜಯಪುರ: ಜಿಲ್ಲೆಯಲ್ಲಿ ಇಂದು ಇಬ್ಬರು ಸೋಂಕಿತರು ಸಾವನ್ನಪ್ಪಿದ್ದು, ಮೃತರು ಸೇರಿ 39 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. 399
ರೋಗಿ -14497, 52 ವರ್ಷದ ವ್ಯಕ್ತಿ ಹಾಗೂ ರೋಗಿ-10320, 85 ವರ್ಷದ ವೃದ್ದೆ ಸಾವನ್ನಪ್ಪಿದ್ದಾರೆ. BP, ಡಯಾಬಿಟಿಸ್, ಹೃದಯ ಸಂಬಂಧಿಕ ಕಾಯಿಲೆಗಳಿಂದ ಇಬ್ಬರು ಬಳಲುತ್ತಿದ್ದರು. ಕೊರೊನಾ ಲಕ್ಷಣ ಕಂಡು ಬಂದಿದ್ದ ಹಿನ್ನೆಲೆ ಸರ್ಕಾರಿ ಆಸ್ಪತ್ರೆಗೆ ಸ್ವಯಂ ದಾಖಲಾಗಿದ್ದ ರೋಗಿ -14497 ಶ್ವಾಸಕೋಶದ ಮೇಲೆ ಕೊರೊನಾ ದುಷ್ಪರಿಣಾಮ ಬೀರಿತ್ತು. ಹೀಗಾಗಿ ಆಸ್ಪತ್ರೆಯಲ್ಲೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಇಂದು 1 ವರ್ಷದ ಬಾಲಕ, ಮೂವರು ಬಾಲಕಿಯರು, ನಾಲ್ವರು ಯುವತಿಯರು, ನಾಲ್ವರು ಯುವಕರು, 19 ಪುರುಷರು ಹಾಗೂ 8 ಮಹಿಳೆಯರು ಸೇರಿ 39 ಸೋಂಕಿತರು ಪತ್ತೆಯಾಗಿದ್ದಾರೆ.
ಜಿಲ್ಲೆಯಲ್ಲಿ 15 ಜನ ಸೇರಿ ಇಲ್ಲಿಯವರೆಗೆ 305 ಜನ ಗುಣಮುಖರಾಗಿದ್ದಾರೆ. 85 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 9 ಜನ ಸಾವನ್ನಪ್ಪಿದ್ದು , 672 ಜನರ ವರದಿ ಬರಬೇಕಿದೆ. ಒಟ್ಟು ಸೋಂಕಿತರ ಸಂಖ್ಯೆ 399 ಕ್ಕೆ ಏರಿದೆ.
ವಿಜಯಪುರ ಜಿಲ್ಲೆಯಲ್ಲಿ ಇಂದು ಇಬ್ಬರ ಸಾವು, 39 ಜನರಲ್ಲಿ ಸೊಂಕು ಪತ್ತೆ - Corona virusupdates
ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಳವಾಗುತ್ತಿದೆ. ಇಂದು ವಿಜಯಪುರ ಜಿಲ್ಲೆಯಲ್ಲಿ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದು 39 ಸೋಂಕಿತ ಪ್ರಕರಣಗಳು ವರದಿಯಾಗಿವೆ.