ಬೆಂಗಳೂರು: ರಸಗೊಬ್ಬರದ ಬೆಲೆ ಏರಿಕೆ ಮಾಡುವುದಿಲ್ಲವೆಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಅವರು ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸಗೊಬ್ಬರ ಸ್ಟಾಕ್ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರದ ಬೆಲೆ ಏರಿಕೆಯಾಯಿತು. ಹಾಗಾಗಿ, ಇಲ್ಲಿ ಹೆಚ್ಚು ಮಾಡುವುದು ಬೇಡವೆಂದು ಮಾರಾಟಗಾರರು ಮನವಿ ಮಾಡಿದರು. ಕೆಲವರು ಒಪ್ಪಿಕೊಂಡರು. ಇನ್ನು ಕೆಲವರು ವಾಪಸ್ ಹೋದರು. ಇದು ಅವರ ಬ್ಯುಸಿನೆಸ್. ಶೇ. 100 ರಷ್ಟು ರೈತರಿಗೆ ಗೊಬ್ಬರ ಏರಿಕೆ ಆಗದ ಹಾಗೆ ಕಡಿಮೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಪ್ಯಾಕೇಜ್ ಬಗ್ಗೆ ನಾನು ಏನನ್ನು ಹೇಳಲ್ಲ ಎಂದ ಅವರು, 6 ಸಾವಿರ ರೂ.ಗಳನ್ನ ಈಗಾಗಲೇ ರೈತರಿಗೆ ಕೊಡಲಾಗುತ್ತಿದೆ. ರೈತರು ಪಡೆದ ಸಾಲ ಪಾವತಿ ಮಾಡಿದರೆ ಶೇ. 3 ಬಡ್ಡಿ ಕಡಿತ ಮಾಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಹೇಳಿದರು.