ಚಾಮರಾಜನಗರ: ಹುಲ್ಲು ಕೊಯ್ಯುವಾಗ ವಿದ್ಯುತ್ ತಂತಿ ತುಳಿದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ತೆರಕಣಾಂಬಿ ಸಮೀಪದ ಮೂಡಗೂರಿನಲ್ಲಿ ನಡೆದಿದೆ.
ಮೂಡಗೂರಿನ ಕೃಷ್ಣನಾಯ್ಕ(35) ಮೃತಪಟ್ಟ ದುರ್ದೈವಿ. ಜಾನುವಾರುಗಳಿಗೆ ಹುಲ್ಲು ಕೊಯ್ಯಲು ತೆರಳಿದ್ದ ವೇಳೆ ತುಂಡರಿಸಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸದ್ಯ, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.