ETV Bharat / briefs

ಲಸಿಕೆಗಾಗಿ ಸಾಲುಗಟ್ಟಿದ ಮಂದಿ : ಆದ್ರೆ, ದಿನಕ್ಕೆ 150 ಮಂದಿಗೆ ಮಾತ್ರ ಲಸಿಕೆ

author img

By

Published : May 11, 2021, 4:52 PM IST

ಆ್ಯಪ್‌ನಲ್ಲಿ ನೀಡಿರುವ ನಂಬರ್ ಆಧಾರದಲ್ಲಿ ಒಬ್ಬೊಬ್ಬರಿಗೆ ಲಸಿಕೆ ವಿತರಣೆ ಮಾಡಲಾಗುತ್ತಿದ್ದು, 150 ಮಂದಿ ಮಾತ್ರ ಲಸಿಕೆ ಸ್ವೀಕಾರಕ್ಕೆ ಅವಕಾಶ ಕಲ್ಪಿಸಿದ್ದರಿಂದ ಹಲವು ಮಂದಿ ಬಂದು ವಾಪಸ್ ತೆರಳುತ್ತಿದ್ದಾರೆ..

vaccination in Karwar
vaccination in Karwar

ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿಯೂ 3ನೇ ಹಂತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದ್ದು, ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಲಸಿಕೆಗಾಗಿ ಜನ ಸಾಲುಗಟ್ಟಿದ್ದಾರೆ.

3ನೇ ಹಂತದ ಅಭಿಯಾನದಲ್ಲಿ 18 ವರ್ಷ ಮೇಲ್ಪಟ್ಟ 44 ವರ್ಷದೊಳಗಿನವರಿಗೆ ಇಂದಿನಿಂದ‌ ಲಸಿಕೆ ನೀಡಲಾಗುತ್ತಿದೆ. ನೋಂದಾಯಿಸಿಕೊಂಡವರಿಗೆ ಬೆಳಗ್ಗಿನಿಂದಲೂ ಲಸಿಕೆ ನೀಡಲು ಪ್ರಾರಂಭಿಸಲಾಗಿದೆ.

ದಿನಪೂರ್ತಿ ಒಟ್ಟು 150 ಮಂದಿಗೆ ಮಾತ್ರ ಲಸಿಕೆ ನೀಡುವ ಟಾರ್ಗೆಟ್ ಇದ್ದು, ನಿನ್ನೆ 18 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ತಲಾ 1 ಸಾವಿರ ಲಸಿಕೆ ತರಿಸಲಾಗಿತ್ತು.

ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಈಗಾಗಲೇ ಸುಮಾರು 95ಕ್ಕಿಂತಲೂ ಮಿಕ್ಕಿ ಯುವಜನರಿಗೆ ಲಸಿಕೆ ನೀಡಲಾಗಿದೆ. ಆರೋಗ್ಯ ಸೇತು ಆ್ಯಪ್ ಮೂಲಕ ನೋಂದಾವಣಿ ಮಾಡಿದ ಜನರಿಗೆ ಮಾತ್ರ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತಿದೆ.

ಆ್ಯಪ್‌ನಲ್ಲಿ ನೀಡಿರುವ ನಂಬರ್ ಆಧಾರದಲ್ಲಿ ಒಬ್ಬೊಬ್ಬರಿಗೆ ಲಸಿಕೆ ವಿತರಣೆ ಮಾಡಲಾಗುತ್ತಿದ್ದು, 150 ಮಂದಿ ಮಾತ್ರ ಲಸಿಕೆ ಸ್ವೀಕಾರಕ್ಕೆ ಅವಕಾಶ ಕಲ್ಪಿಸಿದ್ದರಿಂದ ಹಲವು ಮಂದಿ ಬಂದು ವಾಪಸ್ ತೆರಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.