ಬೆಂಗಳೂರು: ರಾಜ್ಯಪಾಲರ ಸೂಚನೆ ಮೇರೆಗೆ ಇಂದು ವಿಶೇಷ ಕಾರ್ಯದರ್ಶಿ ರಮೇಶ್ ವಿಧಾನಸೌಧಕ್ಕೆ ಭೇಟಿ ನೀಡಿದ್ದರು.
ಇಂದು ಸದನದ ಕಲಾಪ ನಡೆಯುತ್ತಿರುವ ಬಗ್ಗೆ ರಾಜ್ಯಪಾಲರಿಗೆ ವರದಿ ನೀಡುವ ಸಲುವಾಗಿ ವಿಧಾನಸಭೆಗೆ ಆಗಮಿಸಿ, ಸದನ ಕಲಾಪ ವೀಕ್ಷಿಸಿದರು.
ಈಗಾಗಲೇ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಜೊತೆ ಚರ್ಚೆ ನಡೆಸಿದ್ದು, ಸ್ಪೀಕರ್ ರಮೇಶ್ ಕುಮಾರ್ ಜೊತೆಯೂ ಚರ್ಚೆ ನಡೆಸಲಿದ್ದಾರೆ. ನಂತರ ಸದನದ ಕಲಾಪ ನಡೆಯುತ್ತಿರುವ ಬಗ್ಗೆ ರಾಜ್ಯಪಾಲರಿಗೆ ವರದಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.