ETV Bharat / briefs

ಆಸ್ಪತ್ರೆಯಿಂದ ಹಣ ಮರುಪಾವತಿಗೆ ನಕಾರ: ಪ್ರತಿಭಟನೆ ಮಾಡಿದ ಜಾಧವ್ ಭಾವೆ ಬಂಧನ

author img

By

Published : May 27, 2021, 5:33 PM IST

ಪಾವತಿ ಮಾಡಿದ್ದ ನಗದನ್ನು ಮರುಪಾವತಿಸಲು ನಿರಾಕರಿಸಿದ ವರದಿಯ ನಂತರ ಸಾಮಾಜಿಕ ಕಾರ್ಯಕರ್ತ ಜಿತೇಂದ್ರ ಭಾವೆ ಅವರು ನಾಸಿಕ್‌ನ ವೋಕ್‌ಹಾರ್ಡ್ ಆಸ್ಪತ್ರೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕೊರೊನಾ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ.

social-activist-stages-munnabhai-style-protest-gest-refund-from-hospital-after-stripping

ನಾಸಿಕ್ (ಮಹಾರಾಷ್ಟ್ರ): ಕೊರೊನಾ ಸೋಂಕಿತನೊಬ್ಬ ಮಾಡಿದ್ದ ನಗದು ಠೇವಣಿ ಮರುಪಾವತಿಸಲು ನಾಸಿಕ್‌ನ ವೋಕ್‌ಹಾರ್ಡ್ ಆಸ್ಪತ್ರೆ ಆಡಳಿತವು ನಿರಾಕರಿಸಿದೆ ಎಂದು ಆರೋಪಿಸಲಾಗಿದೆ.

ಆಸ್ಪತ್ರೆ ಅಧಿಕಾರಿಗಳ ನಿಲುವನ್ನು ವಿರೋಧಿಸಿ, ಸಾಮಾಜಿಕ ಕಾರ್ಯಕರ್ತ ಮತ್ತು ಆಮ್ ಆದ್ಮಿ ಪಕ್ಷದ ವಕ್ತಾರ ಜಿತೇಂದ್ರ ಭಾವೆ ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆ ಅಧಿಕಾರಿಗಳು ಅಂತಿಮವಾಗಿ ಹಣವನ್ನು ಹಿಂದಿರುಗಿಸಿದ್ದಾರೆ. ಆದರೆ, ಪ್ರತಿಭಟನೆ ವೇಳೆ ಸಾಮಾಜಿಕ ಅಂತರ ಮೆಯಾಗಿದ್ದು, ಈ ಘಟನೆಯನ್ನು ಫೇಸ್​ಬುಕ್​ ಲೈವ್​ ಕೂಡ ಮಾಡಲಾಗಿದೆ.

ಏನಿದು ಘಟನೆ?

ನಾವಿಕ್‌ನ ಸಿನ್ನಾರ್ ಗ್ರಾಮದ ನಿವಾಸಿ ಅಮೋಲ್ ಜಾಧವ್ ಅವರು ಕೊರೊನಾ ಪೋಷಕರ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ 1.5 ಲಕ್ಷ ರೂ. ಜಮಾ ಮಾಡಿದ್ದಾರೆ ಇದಾದ ನಂತರ 10 ಲಕ್ಷ ರೂ. ವಿಮಾ ಪಾವತಿ ಮಾಡಿ ಕಟ್ಟಿದ್ದ ನಗದು ಹಣವನ್ನು ಮರುಪಾವತಿ ಮಾಡಿ ಎಂದು ಕೇಳಿದ್ದಾರೆ. ಆದರೆ, ಆಡಳಿತ ವರ್ಗ ಹಣ ನೀಡಲು ಮುಂದಾಗಿಲ್ಲ.

ಇದಾದ ನಂತರ ಹಣವನ್ನು ಮರಳಿ ಪಡೆಯಲು ಜಾಧವ್ ಭಾವೆ ಅವರ ಸಹಾಯವನ್ನು ಕೋರಿದ್ದಾರೆ. ಹೀಗಾಗಿ ಭಾವೆ ಅವರು ಪ್ರತಿಭಟನೆಗೆ ಇಳಿದಿದ್ದಾರೆ. ಪ್ರತಿಭಟನೆಯ ಸಮಯದಲ್ಲಿ ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿದ್ದರಿಂದ ಪೊಲೀಸರು ಬಂಧಿಸಿದ್ದಾರೆ. ಹಾಗೆ ಏಳು ಗಂಟೆಗಳ ನಂತರ ಬಿಡುಗಡೆ ಮಾಡಲಾಗಿದೆ. ಖಾಸಗಿ ಕಂಪನಿಯಲ್ಲಿ ತಿಂಗಳಿಗೆ 7,000 ರೂ.ಗಳಲ್ಲಿ ಕೆಲಸ ಮಾಡುವ ಜಾಧವ್, ಆಸ್ಪತ್ರೆಯ ಬಿಲ್ ಪಾವತಿಸಲು ಹಣವನ್ನು ಸಾಲವಾಗಿ ಪಡೆದಿದ್ದರು ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.