ಚಿಕ್ಕಬಳ್ಳಾಪುರ: ಗೌರಿಬಿದನೂರು ಶಾಸಕ ಶಿವಶಂಕರ್ ರೆಡ್ಡಿ ಹಾಗೂ ಅನರ್ಹ ಶಾಸಕ ಸುಧಾಕರ್ ನಡುವಿನ ವಾಗ್ವಾದ ತಾರಕಕ್ಕೇರಿದೆ.
ಸದ್ಯ ಅನರ್ಹ ಶಾಸಕ ಡಾ. ಸುಧಾಕರ್ಗೆ ಮಾಜಿ ಸಚಿವ ಶಿವಶಂಕರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ನನ್ನ ಕ್ಷೇತ್ರಕ್ಕೆ ಯಾರೇ ಕೈ ಹಾಕಿದರೂ ಅವರ ಕೈ ಕತ್ತರಿಸುತ್ತೇನೆಂದು ಪರೋಕ್ಷವಾಗಿ ಅನರ್ಹ ಶಾಸಕ ಸುಧಾಕರ್ಗೆ ಎಚ್ಚರಿಕೆ ರವಾನಿಸಿದ್ದಾರೆ.
ಗೌರಿಬಿದನೂರು ತಾಲೂಕಿನ ಹಿರೇಬಿದನೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಮಂಚೇನಹಳ್ಳಿ ನೂತನ ತಾಲೂಕು ಮಾಡುವ ವಿಷಯದಲ್ಲಿ ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಹೋಬಳಿ ಮಂಚೇನಹಳ್ಳಿ ಸೇರಿಸುವ ವಿಷಯದಲ್ಲಿ ಅನರ್ಹ ಶಾಸಕರಿಗೆ ಶಿವಶಂಕರ್ ರೆಡ್ಡಿ ಈ ಎಚ್ಚರಿಕೆ ನೀಡಿದ್ದಾರೆ.