ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಂಡೂರಿನಲ್ಲಿ ಶಿಕ್ಷಕ ವಿಕ್ರಂ ಜೈನ್ ಎಂಬುವವರನ್ನು ಕೊಲೆ ಮಾಡಿದ ಆರೋಪಿಗಳಿಗೆ ಆಶ್ರಯ ನೀಡಿದವರನ್ನು ಬೆಳ್ತಂಗಡಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.
ಮೇ 28ರಂದು ಬೆಳ್ತಂಗಡಿ ತಾಲೂಕಿನ ಮಂಡೂರಿನಲ್ಲಿ ಶಿಕ್ಷಕ ವಿಕ್ರಮ್ ಜೈನ್ ಅವರನ್ನು ನಾಗೇಶ್ ಪೂಜಾರಿ ಮತ್ತು ಅಕ್ಕಯ್ಯ ಸೇರಿ ಹತ್ಯೆ ಮಾಡಿದ್ದರು. ಮಂಗಳೂರು ರೈಲ್ವೆ ನಿಲ್ದಾಣದ ಮೂಲಕ ಮುಂಬೈಗೆ ರೈಲಿನಲ್ಲಿ ತಪ್ಪಿಸಿಕೊಂಡು ಹೊರಟವರನ್ನು ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದರು.
ಆರೋಪಿ ನಾಗೇಶ್ ಪೂಜಾರಿ ಅಣ್ಣ ಗಣೇಶ್ ಪೂಜಾರಿ ಮನೆಯಲ್ಲಿ ಆಶ್ರಯ ಪಡೆದಿದ್ದ. ಇನ್ನು ಗಣೇಶ್ ಪೂಜಾರಿ ಮನೆಯಲ್ಲಿ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಮತ್ತು ಕೊಲೆಯ ದಿನ ಧರಿಸಿದ್ದ ಬಟ್ಟೆಗಳನ್ನುಆರೋಪಿಗಳು ಅಡಗಿಸಿಟ್ಟಿದ್ದರು. ಆರೋಪಿಗಳ ಬಂಧನದ ಬಳಿಕ ವಿಚಾರಣೆ ನಡೆಸಿದಾಗ ಕೊಲೆ ಮಾಡಿದ ಸಂಪೂರ್ಣ ವಿವರವನ್ನು ಬಾಯ್ಬಿಟ್ಟಿದ್ದು. ಗಣೇಶ್ ಪೂಜಾರಿಯನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಮತ್ತು ಬಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿಸಿದ ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಬಂದು ಮಹಜರು ನಡೆಸಿದರು.