ಹೈದರಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ಸ್ಫೋಟಕ ಬ್ಯಾಟ್ಸ್ಮನ್ ಶಾಹಿದ್ ಅಫ್ರಿದಿ ತಮ್ಮ ಜೀವನಚರಿತ್ರೆಯಲ್ಲಿ ಅಪರೂಪದ ಮಾಹಿತಿ ಹಂಚಿಕೊಂಡಿದ್ದಾರೆ.
ಕೀನ್ಯಾದ ನೈರೋಬಿಯಲ್ಲಿ 1996ರಲ್ಲಿ ಶ್ರೀಲಂಕಾ ವಿರುದ್ಧ 37 ಎಸೆತದಲ್ಲಿ ವಿಶ್ವ ದಾಖಲೆಯ ಶತಕ ಬಾರಿಸಿದ್ದರು. ಅಫ್ರಿದಿ ಈ ಶತಕ ಸಿಡಿಸುವ ವೇಳೆ 16 ವರ್ಷ ವಯಸ್ಸು ಎಂದು ದಾಖಲೆಯ ಪುಟ ಸೇರಿತ್ತು.
ಸದ್ಯ ತಮ್ಮ ಅಟೋಬಯೋಗ್ರಫಿ 'ಗೇಮ್ ಚೇಂಜರ್'ನಲ್ಲಿ 1996ರಲ್ಲಿ ದಾಖಲೆಯ ಶತಕ ಸಿಡಿಸಿದ ವೇಳೆ ತಮ್ಮ ವಯಸ್ಸು 19 ಆಗಿತ್ತು, 16 ಎನ್ನುವುದು ತಪ್ಪು ಎಂದು ದೀರ್ಘಕಾಲದ ಗೊಂದಲಕ್ಕೆ ಅಂತ್ಯ ಹಾಡಿದ್ದಾರೆ.
"ನಾನು ಹುಟ್ಟಿದ್ದು 1975ರಲ್ಲಿ. ಶತಕ ಸಿಡಿಸಿದ ಸಂದರ್ಭದಲ್ಲಿ ನನ್ನ ವಯಸ್ಸು 19 ಆಗಿತ್ತು. ಪ್ರಸ್ತುತ 16 ಎಂದು ದಾಖಲಾಗಿರುವುದು ತಪ್ಪು" ಎಂದು ಗೇಮ್ ಚೇಂಜರ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಅಫ್ರಿದಿ ಸ್ಪಷ್ಟನೆಯಲ್ಲೇ ಗೊಂದಲ ಇನ್ನಷ್ಟು ಹೆಚ್ಚಾಗಿದೆ. 1975ರಲ್ಲಿ ಜನಿಸಿದ್ದೆ ಎಂದಿರುವ ಅಫ್ರಿದಿ 1996ರ ವೇಳೆ 21 ವಯಸ್ಸಾಗಿರಬೇಕು. ಆದರೆ ಅಫ್ರಿದಿ 19 ಎಂದಿರುವುದು ಕುತೂಹಲ ಮೂಡಿಸಿದೆ.