ETV Bharat / briefs

ಸ್ಕೂಲ್ ರೀ​​ ಓಪನ್ ಡೇ: ಕಳೆಗಟ್ಟಿದ ದೇಶಿ ಸಂಸ್ಕೃತಿಯ ವಾತಾವರಣ - undefined

ಬೇಸಿಗೆ ರಜೆ ಮುಗಿದ ಮೇಲೆ ಮತ್ತೆ ಶಾಲೆಯತ್ತ ಮಕ್ಕಳು ಅಳುತ್ತಾ ತೆರಳುತ್ತಾರೆ ಎಂಬ ಮಾತನ್ನು ಗಡಿಜಿಲ್ಲೆ ಶಾಲೆಗಳು ಹುಸಿಯಾಗಿಸಿವೆ. ಶೈಕ್ಷಣಿಕ ವರ್ಷದ ಪ್ರಾರಂಭವನ್ನು ಪ್ರತಿ ಬಾರಿಯೂ ಹಬ್ಬದಂತೆ ಆಚರಿಸಿ ಮಕ್ಕಳನ್ನು ವಿಶೇಷವಾಗಿ ಬರಮಾಡಿಕೊಳ್ಳುವ ಚೆನ್ನಿಪುರದ ಸರ್ಕಾರಿ ಶಾಲೆಯಲ್ಲಿ ಇಂದು ಅಕ್ಷರಶಃ ಹಬ್ಬದ ವಾತಾವರಣ ಇತ್ತು.

ಸ್ಕೂಲ್ ರೀ​​ ಓಪನ್ ಡೇ : ಆಹಾ..!
author img

By

Published : May 29, 2019, 5:25 PM IST

ಚಾಮರಾಜನಗರ: ರಜೆಯ ಮಜಾ ಅನುಭವಿಸಿದ್ದ ಮಕ್ಕಳು ಇಂದಿನಿಂದ ಮತ್ತೆ ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ. ಈ ಶಾಲೆಯಲ್ಲಿ ಮಕ್ಕಳು ಬಣ್ಣ-ಬಣ್ಣದ ವೇಷ ತೊಟ್ಟು ಸಂಭ್ರಮದಿಂದ ಶಾಲೆಯತ್ತ ಮುಖಮಾಡಿದ್ದಾರೆ.

ಶೈಕ್ಷಣಿಕ ವರ್ಷದ ಪ್ರಾರಂಭವನ್ನು ಪ್ರತಿ ಬಾರಿಯೂ ಹಬ್ಬದಂತೆ ಆಚರಿಸಿ ಮಕ್ಕಳನ್ನು ವಿಶೇಷವಾಗಿ ಬರಮಾಡಿಕೊಳ್ಳುವ ಚೆನ್ನಿಪುರದ ಸರ್ಕಾರಿ ಶಾಲೆಯಲ್ಲಿ ಇಂದು ಹಬ್ಬದ ವಾತಾವರಣ ಕಳೆಗಟ್ಟಿತ್ತು. 1ನೇ ತರಗತಿಗೆ ದಾಖಲಾದ ಮಕ್ಕಳು ವಿಶೇಷವಾಗಿ ಸಿಂಗಾರಗೊಂಡು ಹಿರಿಯ ಸಹಪಾಠಿಗಳೊಂದಿಗೆ ಮೆರವಣಿಗೆ ಮೂಲಕ ಶಾಲೆಗೆ ಆಗಮಿಸಿದರು. ಮಕ್ಕಳ ಮೆರವಣಿಗೆಗೆ ಗೊರವರ ಕುಣಿತದ ಕಲಾವಿದರು ಮೆರಗು ತುಂಬಿದರು.

ಇನ್ನು, ಶಾಲೆಯ ಪ್ರವೇಶದ್ವಾರದಲ್ಲಿ ಶಿಕ್ಷಕಿಯರು ಮಕ್ಕಳಿಗೆ ಆರತಿ ಎತ್ತಿ, ಸಿಹಿ ತಿಂಡಿ ನೀಡಿ ಬರಮಾಡಿಕೊಂಡರು. ಹೊಸದಾಗಿ ದಾಖಲಾದ ಮಕ್ಕಳು ಶಾಲೆಯ ಆವರಣದಲ್ಲಿ ಗಿಡ ನೆಟ್ಟು ಮಾದರಿ ಸಂಸ್ಕೃತಿಗೆ ನೀರೆರೆದರು.

ಸ್ಕೂಲ್ ರೀ​​ ಓಪನ್ ಡೇ : ಆಹಾ..!

ಈ ಕುರಿತು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಮಂಜುಳಾ ಸುದ್ದಿಗಾರರೊಂದಿಗೆ ಮಾತನಾಡಿ, ಶಾಲೆ ಪ್ರಾರಂಭವೆಂದರೆ ಅದೊಂದು ಸಂಭ್ರಮ. ಇದಕ್ಕಾಗಿಯೇ ಶಾಲೆಯ ಸಿಬ್ಬಂದಿ 1 ವಾರದಿಂದ ತಯಾರಿ ಮಾಡಿಕೊಂಡಿದ್ದಾರೆ. ಸಮರ್ಪಕವಾಗಿ ಸಮವಸ್ತ್ರ, ಪಠ್ಯ ಪುಸ್ತಕಗಳು ಬಂದಿವೆ. ಶಾಲೆಯ ಮೊದಲ ದಿನದಿಂದಲೇ ಪಾಠ ಪ್ರಾರಂಭವಾಗಲಿದ್ದು, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.

ಎತ್ತಿನಗಾಡಿಯಲ್ಲಿ ಬಂದ ಮಕ್ಕಳು:

ಯಳಂದೂರು ತಾಲೂಕಿನ ಯರಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಶಾಲೆಗೆ ಎತ್ತಿನಗಾಡಿಯಲ್ಲಿ ಕರೆತರುವ ಮೂಲಕ ದೇಶಿ ಸೊಗಡನ್ನು ಮೆರೆದರು. ಒಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸೆಳೆಯಲು ಸರ್ಕಾರಿ ಶಾಲೆಗಳು ನಡೆಸುತ್ತಿರುವ ಈ ಪ್ರಯತ್ನ ಸಾರ್ವಜನಿಕರ ಮೆಚ್ಚುಗೆ ಪಡೆದಿದೆ.

Intro:ಸ್ಕೂಲ್ ರೀ ಓಪನ್ ಡೇ: ಗೊರವರ ಕುಣಿತ, ಆರತಿ ಎತ್ತಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ಶಿಕ್ಷಕರು

ಚಾಮರಾಜನಗರ: ರಜೆಯ ಮಜಾ ಅನುಭವಿಸಿದ್ದ ಮಕ್ಕಳು ಶಾಲಾ ಪ್ರಾರಂಭವೆಂದರೇ ಬೇಸರಿಸಿಕೊಳ್ಳುವುದು ಸಹಜ. ಆದರೆ, ಈ ಶಾಲೆಯ ಮಕ್ಕಳು ಬಣ್ಣ-ಬಣ್ಣದ ವೇಷ ತೊಟ್ಟು ಸಂಭ್ರಮದಿಂದ ಶಾಲೆಯತ್ತ ಹೆಜ್ಜೆ ಹಾಕಿದ ಸ್ಟೋರಿ ಇಲ್ಲಿದೆ ನೋಡಿ.

Body:ಶೈಕ್ಷಣಿಕ ವರ್ಷದ ಪ್ರಾರಂಭವನ್ನು ಪ್ರತಿಬಾರಿಯೂ ಹಬ್ಬದಂತೆ ಆಚರಿಸಿ ಮಕ್ಕಳನ್ನು ವಿಶೇಷವಾಗಿ ಬರಮಾಡಿಕೊಳ್ಳುವ ಚೆನ್ನಿಪುರದ ಸರ್ಕಾರಿ ಶಾಲೆಯಲ್ಲಿ ಇಂದು ಸಂಭ್ರಮದ ವಾತಾವರಣ ಕಳೆಗಟ್ಟಿತ್ತು.

ಒಂದನೇ ತರಗತಿಗೆ ದಾಖಲಾದ ಮಕ್ಕಳು ವಿಶೇಷವಾಗಿ ಸಿಂಗಾರಗೊಂಡು ಹಿರಿಯ ಸಹಪಾಠಿಗಳೊಂದಿಗೆ ಮೆರವಣಿಗೆ ಮೂಲಕ ಶಾಲೆಗೆ ಆಗಮಿಸಿದರು. ಮಕ್ಕಳ ಮೆರವಣಿಗೆಗೆ ಗೊರವರ ಕುಣಿತ ಸಾಥ್ ನೀಡಿ ಎಲ್ಲರನ್ನು ಸೆಳೆದಿತ್ತು.

ಇನ್ನು, ಶಾಲೆಯ ಪ್ರವೇಶದ್ವಾರದಲ್ಲಿ ಶಿಕ್ಷಕಿಯರು ಮಕ್ಕಳಿಗೆ ಆರತಿ, ಸಿಹಿ ನೀಡಿ ಬರಮಾಡಿಕೊಂಡರು. ಹೊಸದಾಗಿ ದಾಖಲಾದ ಮಕ್ಕಳು ಶಾಲಾವರಣದಲ್ಲಿ ಗಿಡ ನೆಟ್ಟು ಮಾದರಿ ಸಂಸ್ಕೃತಿಗೆ ನೀರೆರೆದರು.

ಈ ಕುರಿತು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಮಂಜುಳಾ ಸುದ್ದಿಗಾರರೊಂದಿಗೆ ಮಾತನಾಡಿ, ಶಾಲಾ ಪ್ರಾರಂಭವೆಂದರೆ ಅದೊಂದು ಸಂಭ್ರಮ, ಇದಕ್ಕಾಗಿಯೇ ಶಾಲೆ ೧ ವಾರದ ತಯಾರಿ ಮಾಡಿಕೊಂಡಿದ್ದಾರೆ. ಶಾಲಾವರಣವನ್ನು ಸ್ವಚ್ಛವಾಗಿಟ್ಟುಕೊಂಡು ಮೊದಲ ದಿನದಿಂದಲೇ ಪಾಠ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ಸಮರ್ಪಕವಾಗಿ ಸಮವಸ್ತ್ರ, ಪಠ್ಯ ಪುಸ್ತಕಗಳನ್ನು ಬಂದಿದ್ದು ಶಾಲೆಯ ಮೊದಲ ದಿನದಿಂದಲೇ ಪಾಠ ಪ್ರಾರಂಭವಾಗಲಿದ್ದು, ಪೋಷಕರು ಮಕ್ಕಳನ್ನು ಕಳುಹಿಸಬೇಕು ಎಂದು ಮನವಿ ಮಾಡಿದರು.

ಎತ್ತಿನಗಾಡಿಯಲ್ಲಿ ಬಂದ ಮಕ್ಕಳು: ಯಳಂದೂರು ತಾಲೂಕಿನ ಯರಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಶಾಲೆಗೆ ಎತ್ತಿನಗಾಡಿಯಲ್ಲಿ ಕರೆತರುವ ಮೂಲಕ ದೇಸಿ ಸೊಗಡನ್ನು ಮೆರೆದರು.

Conclusion:ಒಟ್ಟಿನಲ್ಲಿ ಶಾಲೆ ರೀ ಓಪನ್ ಎಂದರೆ ಮಕ್ಕಳು ಅಳುತ್ತಾ ತೆರಳುತ್ತಾರೆ ಎಂಬ ಮಾತನ್ನು ಗಡಿಜಿಲ್ಲೆ ಶಾಲೆಗಳು ಸುಳ್ಳು ಮಾಡಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.