ಶಿವಮೊಗ್ಗ: ನಗರದಲ್ಲಿ ಜಯನಗರ ಪೊಲೀಸ್ ಠಾಣೆಗೆ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ.
ಕೊರೊನಾ ಲಕ್ಷಣ ಕಂಡುಬಂದಿರುವ ಡಿ.ಎ.ಆರ್ ನ ಎ.ಎಸ್.ಐ ಅವರ ಪುತ್ರಿ ಇದೇ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಪ್ರಥಮ ಸಂಪರ್ಕಿತರಾಗಿರುವ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರಿನ ಪಾದರಾಯನಪುರದಲ್ಲಿ ಕರ್ತವ್ಯ ನಿರ್ವಹಿಸಿ ಬಂದ ಎ.ಎಸ್. ಐ ಅವರಲ್ಲಿ ಇದುವರೆಗೂ ಕೊರೊನಾ ಗುಣ ಲಕ್ಷಣಗಳು ಕಂಡು ಬಂದಿಲ್ಲ. ಆದರೆ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿದ್ದು ಹೆಚ್ಚಿನ ಆಂತಕಕ್ಕೆ ಕಾರಣವಾಗಿದೆ. ಇದರಿಂದ ಜಯನಗರ ಪೊಲೀಸ್ ಠಾಣೆಯ ಎಲ್ಲಾ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಸದ್ಯ ಮಹಿಳಾ ಕಾನ್ಸ್ಟೇಬಲ್ ವರದಿಗಾಗಿ ಕಾಯುತ್ತಿರುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.