ETV Bharat / briefs

ಅಭಿಮಾನಿಗಳಿಗೆ ದರ್ಶನ ಕೊಟ್ಟ ಕ್ರಿಕೆಟ್​ ದೇವರು... ಸೆಲ್ಫಿ ಫೋಸ್​ಗೂ ಸೈ ಅಂದ್ರು ಸಚಿನ್​ - ಐಪಿಎಲ್​

ಹನ್ನೊಂದನೇ ವಯಸ್ಸಿನಲ್ಲಿಯೇ ಕ್ರಿಕೆಟ್ ಬ್ಯಾಟ್ ಕೈಗೆತ್ತಿಕೊಂಡು ಆಡಲು ಪ್ರಾರಂಭಿಸಿ ಕೇವಲ ಹದಿನಾರನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ ಭಾರತ ಕ್ರಿಕೆಟ್​ ತಂಡಕ್ಕೆ ಬರೋಬ್ಬರಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಮುಂಬೈನ ಸಚಿನ್​ ರಮೇಶ್​ ತೆಂಡೂಲ್ಕರ್​ ಇಂದು ತಮ್ಮ 46 ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಸಚಿನ್
author img

By

Published : Apr 24, 2019, 3:30 PM IST

ಮುಂಬೈ: ಕ್ರಿಕೆಟ್​ ಲೋಕ ಕಂಡ ಶ್ರೇಷ್ಠ ಕ್ರಿಕೆಟಿಗ ಸಚಿನ್​ ಇಂದು ತಮ್ಮ 46 ನೇ ವಸಂತಕ್ಕೆ ಕಾಲಿಟ್ಟಿದ್ದು, ನೂರಾರು ಅಭಿಮಾನಿಗಳು ಸಚಿನ್​ ಮನೆ ಬಳಿ ಜಮಾಯಿಸಿ ಶುಭಾಶಯ ಕೋರಿದ್ದಾರೆ.

ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ ಜನ್ಮದಿನದ ಶುಭ ಕೋರಲು ಮುಂಬೈನ ಸಚಿನ್​ ಮನೆಯ ಮುಂದೆ ಸೇರಿದ್ದರು. ಕೂಡಲೆ ಸಚಿನ್​ ಅಭಿಮಾನಿಗಳೊಂದಿಗೆ ಸಮಯ ಕಳೆದಿದ್ದು, ಸೆಲ್ಫಿಗಾಗಿ ಬೇಡಿಕೆ ಇಟ್ಟವರಿಗೂ ಬೇಸರಿಸದೆ ಫೋಸ್​ ನೀಡಿದ್ದಾರೆ.

sachin-tendulkar
ಸಚಿನ್​

ಕ್ರಿಕೆಟ್​ ದೇವರೆಂದೇ ಹೆಸರಾದ ಸಚಿನ್​ 1973 ಏಪ್ರಿಲ್​ 24 ರಂದು ಜನಿಸಿದ್ದಾರೆ. 1989ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಸಚಿನ್​ 2013 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದರು.

sachin-tendulkar
ಸೆಲ್ಫಿಗೆ ಫೋಸ್ ಸೈ ಅಂದ್ರು ಸಚಿನ್​

ಕ್ರಿಕೆಟ್​ನಿಂದ ದೂರವಾಗಿದ್ದರೂ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ಮಾತ್ರ ಸಚಿನ್​ ಇನ್ನು ಮಾಸ್ಟರ್​ ಬ್ಲಾಸ್ಟರ್​ ಆಗಿಯೇ ಇದ್ದಾರೆ. ಸದ್ಯ ಐಪಿಎಲ್​ನಲ್ಲಿ ಮುಂಬೈ ತಂಡದ ಮೆಂಟರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Intro:Body:

ಅಭಿಮಾನಿಗಳಿಗೆ ದರ್ಶನ ಕೊಟ್ಟ ಕ್ರಿಕೆಟ್​ ದೇವರು... ಸೆಲ್ಫಿಗೆ ಫೋಸ್ ಸೈ ಅಂದ್ರು ಸಚಿನ್​

ಮುಂಬೈ: ಕ್ರಿಕೆಟ್​ ಲೋಕ ಕಂಡ ಶ್ರೇಷ್ಠ ಕ್ರಿಕೆಟಿಗ ಸಚಿನ್​ ಇಂದು ತಮ್ಮ 46 ನೇ ವಸಂತಕ್ಕೆ ಕಾಲಿಟ್ಟಿದ್ದು, ನೂರಾರು ಅಭಿಮಾನಿಗಳು ಸಚಿನ್​ ಮನೆ ಬಳಿ ಜಮಾಯಿಸಿ ಶುಭಾಶಯ ಕೋರಿದ್ದಾರೆ.

ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ ಜನ್ಮದಿನದ ಶುಭ ಕೋರಲು ಮುಂಬೈನ ಸಚಿನ್​ ಮನೆಯ ಮುಂದೆ ಸೇರಿದ್ದರು. ಕೂಡಲೆ ಸಚಿನ್​ ಅಭಿಮಾನಿಗಳೊಂದಿಗೆ ಸಮಯ ಕಳೆದಿದ್ದು, ಸೆಲ್ಫಿಗಾಗಿ ಬೇಡಿಕೆ ಇಟ್ಟವರಿಗೂ ಬೇಸರಿಸದೆ ಫೋಸ್​ ನೀಡಿದ್ದಾರೆ.

ಕ್ರಿಕೆಟ್​ ದೇವರೆಂದೆ ಹೆಸರಾದ ಸಚಿನ್​ 1973 ಏಪ್ರಿಲ್​ 24 ರಂದು ಜನಿಸಿದ್ದಾರೆ. 1989ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಸಚಿನ್​ 2013 ರಲ್ಲಿ 

 ಅಮತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದರು. 

ಕ್ರಿಕೆಟ್​ನಿಂದ ದೂರವಾಗಿದ್ದರು ಕೋಟ್ಯಾಂತರ ಅಭಿಮಾನಿಗಳ ಮನದಲ್ಲಿ ಮಾತ್ರ ಸಚಿನ್​ ಇನ್ನು ಮಾಸ್ಟರ್​ ಬ್ಲಾಸ್ಟರ್​ ಆಗಿಯೇ ಇದ್ದಾರೆ. ಸದ್ಯ ಐಪಿಎಲ್​ನಲ್ಲಿ ಮುಂಬೈ ತಂಡದ ಮೆಂಟರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.