ನವದೆಹಲಿ: ಚಿಲ್ಲರೆ ಹಣದುಬ್ಬರ ಏಳು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯೇ ಇದಕ್ಕೆ ಮುಖ್ಯ ಕಾರಣ ಎಂದು ತಿಳಿದು ಬಂದಿದೆ.
ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ.3.05ಕ್ಕೆ ತಲುಪಿದ್ದಾಗಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕೇಂದ್ರ ಅಂಕಿ-ಅಂಶಗಳ ವಿಭಾಗ(ಸಿಎಸ್ಒ) ತಿಳಿಸಿರುವ ಪ್ರಕಾರ, ಕಳೆದ ವರ್ಷದ ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ 4.87ರಷ್ಟಿತ್ತು. ಇದೀಗ ಅದು ಶೇ 3.05ರಷ್ಟು ಇದೆ ಎಂದಿದೆ.
ಆಹಾರ ಸಾಮಗ್ರಿಗಳ ಬೆಲೆ ಕೂಡ ಶೇ. 1.83ರಷ್ಟು ಏರಿಕೆಯಾಗಿದ್ದು, ಕಳೆದ ಏಪ್ರಿಲ್ ತಿಂಗಳಲ್ಲಿ ಅದು ಶೇ. 1.1ರಷ್ಟಿತ್ತು ಎಂದು ತಿಳಿಸಿದೆ.