ETV Bharat / briefs

ಧೋನಿ ಆರ್ಭಟ ವ್ಯರ್ಥ... ಆರ್​ಸಿಬಿಗೆ 1 ರನ್​ಗಳ ಅದೃಷ್ಟದ ಜಯ - ಧೋನಿ

ಕೊನೆಯ ಓವರ್​ನಲ್ಲಿ ಬೇಕಿದ್ದ 26 ರನ್​ಗಳಲ್ಲಿ 24 ರನ್​ ಗಳಿಸಿದ ಧೋನಿ ಕೊನೆಯ ಎಸೆತದಲ್ಲಿ ಕೇವಲ 2 ರನ್​ಗಳಿಸಲಾಗದೇ ಒಂದು ರನ್ನಿನಿಂದ ರೋಚಕ ಸೋಲು ಕಂಡಿದೆ.

dhoni
author img

By

Published : Apr 22, 2019, 12:05 AM IST

Updated : Apr 22, 2019, 11:37 AM IST

ಬೆಂಗಳೂರು: ಇಡೀ ಟಿ20 ಕ್ರಿಕೆಟ್​ನಲ್ಲಿ ಅತ್ಯಂತ ರೋಚಕವಾಗಿದ್ದ ಆರ್​ಸಿಬಿ - ಸಿಎಸ್​ಕೆ ನಡುವಿನ ಪಂದ್ಯದಲ್ಲಿ ಕೊನೆಯ ಓವರ್​ನಲ್ಲಿ ಗೆಲುವಿಗೆ ಬೇಕಿದ್ದ 26 ರನ್​ಗಳಲ್ಲಿ ಧೋನಿ 24 ರನ್​ಗಳಿಸಲಷ್ಟೇ ಶಕ್ತವಾಗಿ ಕೇವಲ ಒಂದು ರನ್​​ನಿಂದ ರೋಚಕ ಸೋಲನುಭಿವಿಸಿತು.

ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ 20 ಓವರ್​ಗಳಲ್ಲಿ 161 ರನ್​ಗಳಿಸಿತ್ತು. ಆರಂಭಿಕ ಪಾರ್ಥಿವ್​ ಪಟೇಲ್​ 53 ರನ್​ ಹಾಗೂ ಮೊಯಿನ್​ ಅಲಿ 26, ಎಬಿಡಿ 25 ರನ್​ಗಳಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.

162 ರನ್​ಗಳ ಬೆನ್ನೆತ್ತಿದ ಸಿಎಸ್​ಕೆ ಎಂಎಸ್​ ಧೋನಿಯ ಏಕಾಂಗಿ ಹೋರಾಟದ ನೆರವಿನಿಂದ ಕೇವಲ 1 ರನ್​ಗಳ ರೋಚಕ ಸೋಲುಕಂಡಿತು. ಎಂಎಸ್​ ಧೋನಿ ಕೇವಲ 48 ಎಸೆತಗಳಲ್ಲಿ 5 ಬೌಂಡರಿ 7 ಸಿಕ್ಸರ್​ ಸಿಡಿಸಿ 84 ರನ್​ಗಳಿಸಿ ಔಟಾಗದೆ ಉಳಿದರು. ಧೋನಿಗೆ ಬೆಂಬಲ ನೀಡಿದ ರಾಯುಡು 29 ರನ್​ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಬ್ಯಾಟ್ಸ್​ಮನ್​ಗಳು ಆರ್​ಸಿಬಿ ಬೌಲರ್​ಗಳ ಮುಂದೆ ನಿಲ್ಲಲಾರದಾದರು.

ಆರ್​ಸಿಬಿ ಪರ ಡೇಲ್​ ಸ್ಟೈನ್​ 2, ಸೈನಿ 1, ಉಮೇಶ್​ ಯಾದವ್​ 2, ಚಹಾಲ್​ 1ವಿಕೆಟ್​​ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Intro:Body:Conclusion:
Last Updated : Apr 22, 2019, 11:37 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.