ಬೆಂಗಳೂರು : ರ‍್ಯಾಪಿಡೋ ಸಂಸ್ಥೆ ಕೋವಿಡ್ ವಾರಿಯರ್‌ಗಳಿಗೆ ಕೃತಜ್ಞತೆ ಸಲ್ಲಿಸಿದೆ. ದೆಹಲಿ ಮತ್ತು ಬೆಂಗಳೂರಿನ ಪೊಲೀಸ್ ಸಿಬ್ಬಂದಿ, ಆರೋಗ್ಯ ಸೇವಾ ಕಾರ್ಯಕರ್ತರು ಮತ್ತು ಕಾರ್ಪೊರೇಷನ್ ಕೆಲಸಗಾರರಿಗೆ ಕೋವಿಡ್ ಕೇರ್ ಕಿಟ್‌ಗಳನ್ನ ವಿತರಣೆ ಮಾಡಲಾಗುತ್ತಿದೆ.
10,000 ಕಿಟ್‌ಗಳನ್ನು ದೆಹಲಿ ವಿವಿಧ ಚೆಕ್ ಪಾಯಿಂಟ್‌ಗಳಲ್ಲಿ ಪೊಲೀಸ್ ಸಿಬ್ಬಂದಿಗೆ, ಬೆಂಗಳೂರಿನ ಆರೋಗ್ಯ ಸೇವಾ ಮತ್ತು ಕಾರ್ಪೊರೇಷನ್ ಕೆಲಸಗಾರರಿಗೆ ನೀಡಲಾಗಿದೆ.
ಸಾಂಕ್ರಾಮಿಕ ರೋಗವಾದ ಕೋವಿಡ್ 2ನೇ ಅಲೆಯ ನಡುವೆಯೂ ವಾರಿಯರ್‌ಗಳು ನಮ್ಮೆಲ್ಲರನ್ನು ಸುರಕ್ಷಿತವಾಗಿರಿಸಲು ಹಗಲು-ರಾತ್ರಿ ದಣಿವರಿಯದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಕೋವಿಡ್ ವಾರಿಯರ್‌ಗಳು ಕೆಲವು ಗಂಟೆ ಕೂಡ ಬಿಡುವು ತೆಗೆದುಕೊಳ್ಳದೆ ಮತ್ತು ಸೂಕ್ತ ಆಹಾರವಿಲ್ಲದೆ ಕೆಲಸ ಮಾಡುವ ಮೂಲಕ ನಾವು ನಮ್ಮ ಮನೆಗಳಲ್ಲಿ ಸುರಕ್ಷಿತವಾಗಿರಲು ನೆರವಾಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.
ಭಾರತದ ಅತ್ಯಂತ ದೊಡ್ಡ ಬೈಕ್ ಟ್ಯಾಕ್ಸಿ ಪ್ಲಾಟ್‌ಫಾರಂ ರ‍್ಯಾಪಿಡೋ ಭಾರತದ ಕೋವಿಡ್ ವಿರುದ್ಧದ ಸಮರದಲ್ಲಿ ತನ್ನ ಬೆಂಬಲ ವ್ಯಕ್ತಪಡಿಸಿದೆ ಮತ್ತು ರ‍್ಯಾಪಿಡೋ ಪಿಟ್ ಸ್ಟಾಪ್ ಅಭಿಯಾನದ ಅಡಿಯಲ್ಲಿ ದೆಹಲಿ ಮತ್ತು ಬೆಂಗಳೂರಿನಲ್ಲಿ 40,000 ಕೋವಿಡ್ ಕೇರ್ ವಿತರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಅಭಿಯಾನವು ನಗರದ ವಿವಿಧ ಭಾಗಗಳ ಚೆಕ್‌ಪೋಸ್ಟ್‌ಗಳಲ್ಲಿರುವ ಪೊಲೀಸರು, ಆರೋಗ್ಯಸೇವಾ ಸಿಬ್ಬಂದಿಯಾದ ವೈದ್ಯರು, ಶುಶ್ರೂಷಕಿಯರು ಮತ್ತು ಆಶಾ ಕಾರ್ಯಕರ್ತೆಯರು ಪೌರ ಕಾರ್ಮಿಕರಿಗೆ ಕೊಂಚ ನೆಮ್ಮದಿ ನೀಡುವ ಉದ್ದೇಶ ಹೊಂದಿದೆ. ಕಂಪನಿಯು ಈ ಅಭಿಯಾನವನ್ನು ತನ್ನ ವ್ಯಾಪ್ತಿ ಹೊಂದಿರುವ ಇತರ ನಗರಗಳಗೂ ವಿಸ್ತರಿಸುವ ಯೋಜನೆ ಹೊಂದಿದೆ ಎಂದು ಕಂಪನಿ ತಿಳಿಸಿದೆ.
ರಾಪಿಡೋ ಕ್ಯಾಪ್ಟನ್‌ಗಳು ನವೋತ್ಸಾಹ ತುಂಬಲು ಮತ್ತು ಸುರಕ್ಷಿತವಾಗಿರಿಸಿಕೊಳ್ಳಲು ನೆರವಾಗುವ ಫೇಸ್ ಮಾಸ್ಕ್‌ಗಳು, ಹ್ಯಾಂಡ್ ಸ್ಯಾನಿಟೈಸರ್ಗಳು, ಆಹಾರ ಮತ್ತು ಪಾನಿಯದ ಪ್ಯಾಕೆಟ್‌ಗಳನ್ನು ಒಳಗೊಂಡ ಕಿಟ್‌ಗಳನ್ನು ನೀಡಿದ್ದಾರೆ. ರಾಜಧಾನಿಯಲ್ಲಿ ಕ್ಯಾಪ್ಟನ್‌ಗಳು ಪ್ಯಾಕೇಜ್‌ಗಳನ್ನು ಬಿಟಿಎಂ ಲೇಔಟ್‌ನ ತಾವರೆಕೆರೆಯ ಪಾಲಿಕೆ ಆರೋಗ್ಯ ಕೇಂದ್ರ, ಆಡುಗೋಡಿಯ ಬಿಬಿಎಂಪಿ ಕೇಂದ್ರ, ವಿಲ್ಸನ್ ಗಾರ್ಡನ್‌ನ ಅಗಡಿ ಆಸ್ಪತ್ರೆಯ ಸಿಬ್ಬಂದಿ, ಶುಶ್ರೂಕಿಯರು ಮತ್ತು ಜೆಪಿ ನಗರದ ಸುಪ್ರ ಆಸ್ಪತ್ರೆಯಲ್ಲಿ ವಿತರಿಸಿದರು.
ಹೆಚ್ಎಸ್‌ಆರ್ ಲೇಔಟ್, ಜಯನಗರ, ಬಿಟಿಎಂ ಮತ್ತು ಕೋರಮಂಗಲದ ಆಶಾ ಕಾರ್ಯಕರ್ತೆಯರು ಮತ್ತು ಕಾರ್ಪೊರೇಷನ್ ಕೆಲಸಗಾರರು ಹಾಗೂ ಜೆಪಿನಗರ, ಬಿಟಿಎಂ ಮತ್ತು ಹೆಚ್ಎಸ್‌ಆರ್ ಜೆಕ್‌ಪಾಯಿಂಟ್‌ಗಳ ಪೊಲೀಸ್ ಸಿಬ್ಬಂದಿಗೆ ಕೂಡ ವಿತರಿಸಿದರು.
ರ‍್ಯಾಪಿಡೋ ಸಹ-ಸಂಸ್ಥಾಪಕ ಪವನ್ ಗುಂಟುಪಟ್ಟಿ ಮಾತನಾಡಿ,"ಈ ಸಂಕಷ್ಟದ ಸಮಯದಲ್ಲಿ ತಮ್ಮನ್ನು ಅಪಾರ ತೊಂದರೆಗೆ ಒಡ್ಡಿಕೊಂಡು ಸತತವಾಗಿ ಮತ್ತು ಸ್ವಾರ್ಥರಹಿತವಾಗಿ ಕೋವಿಡ್ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ನಾಗರಿಕರಿಗೆ ಈ ಸಾಂಕ್ರಾಮಿಕ ರೋಗದಿಂದ ಸುರಕ್ಷಿತವಾಗಿರಲು ನೆರವಾಗುತ್ತಿದ್ದಾರೆ. ನಾವು ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡುತ್ತಿದ್ದೇವೆ ಎಂದಿದ್ದಾರೆ.
ಕೋವಿಡ್ ವಾರಿಯರ್‌ಗಳ ಕೊಡುಗೆಯು ಬೆಲೆ ಕಟ್ಟಲಾಗದ್ದು ಮತ್ತು ಅವರಿಗೆ ಕೃತಜ್ಞತೆ ತೋರಿಸುವ ನಮ್ಮ ವಿಧಾನವಾಗಿದೆ' ಎಂದು ಹೇಳಿದ್ದಾರೆ. ರೈಡ್ ಟು ವ್ಯಾಕ್ಸಿನೇಟ್ ಅಭಿಯಾನ ಕೂಡ ಪ್ರಾರಂಭಿಸಲಾಗಿದೆ. ಅರ್ಹ ಗ್ರಾಹಕರಿಗೆ ಲಸಿಕೆ ಪಡೆಯಲು, ಆಯ್ದ ಆಸ್ಪತ್ರೆಗಳಗೆ ಹೋಗಲು ಮತ್ತು ಬರಲು ಉಚಿತ ರೈಡ್‌ಗಳನ್ನು ಸಹ ರ‍್ಯಾಪಿಡೋ ನೀಡಿತ್ತು ಎಂದು ತಿಳಿಸಿದ್ದಾರೆ.