ETV Bharat / briefs

ಐದು ವರ್ಷದ ತಪಸ್ಸು, 60 ಬಾರಿ ಕ್ಷೇತ್ರಕ್ಕೆ ಭೇಟಿ... ಛಲ ಬಿಡದೆ ಹೋರಾಡಿ ಗೆದ್ದ ಸ್ಮೃತಿ ಇರಾನಿ..! - ಕಾಂಗ್ರೆಸ್

ಅಮೇಠಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿಯನ್ನು ಸೋಲಿಸಿರುವ ಸ್ಮೃತಿ ಇರಾನಿ ಗೆಲುವಿನ ನಿಟ್ಟುಸಿರು ಬಿಟ್ಟಿದ್ದಾರೆ. ಈ ಗೆಲುವಿನ ಹಿಂದೆ ವರ್ಷಗಳ ಶ್ರಮ, ಹೋರಾಟವಿದೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...

ಸ್ಮೃತಿ ಇರಾನಿ
author img

By

Published : May 26, 2019, 5:24 PM IST

ನವದೆಹಲಿ: ಉತ್ತರ ಪ್ರದೇಶದ ಅಮೇಠಿ ಎನ್ನುವ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಕಳೆದ ನಾಲ್ಕು ದಶಕದಿಂದ ಗಾಂಧಿ ಕುಟುಂಬದ ಹೊರತಾದ ಆಲೋಚನೆಯೇ ಇಲ್ಲಿ ಇರಲಿಲ್ಲ. ಇಂತಹ ಭದ್ರಕೋಟೆಯನ್ನು ಸ್ಮೃತಿ ಇರಾನಿ ಎನ್ನುವ ಗಟ್ಟಿಗಿತ್ತಿ ಭೇದಿಸಿ ಕಮಲ ಬಾವುಟವನ್ನು ನೆಟ್ಟಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಗೆ ಮೊದಲ ಬಾರಿಗೆ ಎದುರಾಗಿದ್ದು ಸ್ಮೃತಿ ಇರಾನಿ ಭರ್ಜರಿ ಫೈಟ್ ನೀಡಿದ್ದರು. ಭಾರಿ ಅಂತರದಲ್ಲಿ ನಿರಾಯಾಸ ಗೆಲುವು ಸಾಧಿಸುತ್ತಿದ್ದ ರಾಗಾ 2014 ಲೋಕಸಮರದಲ್ಲಿ ಜಸ್ಟ್ ಒಂದು ಲಕ್ಷ ಅಂತರದಿಂದ ಪ್ರಯಾಸದ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ರಾಹುಲ್​ಗೆ ಸೋಲುಣಿಸಿರುವ ಸ್ಮೃತಿ ಇರಾನಿ ಗೆಲುವಿನ ನಗೆ ಬೀರಿದ್ದಾರೆ. ಈ ಗೆಲುವಿನ ಹಿಂದೆ ವರ್ಷಗಳ ಶ್ರಮ, ಹೋರಾಟವಿದೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...

ಆಪ್ತನ ಶವ ಹೊರಲು ಹೆಗಲು ಕೊಟ್ಟ ಕೇಂದ್ರ ಸಚಿವೆ ಸ್ಮೃತಿ ಇರಾನಿ: ವಿಡಿಯೋ ವೈರಲ್​

ಹ್ಯಾಟ್ರಿಕ್​ ಗೆಲುವು ಸಾಧಿಸಿದ ಹೊರತಾಗಿಯೂ ರಾಹುಲ್ ಗಾಂಧಿ ಅಮೇಠಿ ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವಲ್ಲಿ ಸಂಪೂರ್ಣವಾಗಿ ಸೋತಿದ್ದರು. ಇದೇ ವಿಚಾರವನ್ನು ಪ್ರಮುಖ ಅಸ್ತ್ರವನ್ನಾಗಿಸಿಕೊಂಡ ಸ್ಮೃತಿ ಇರಾನಿ ಪ್ರಚಾರದಲ್ಲಿ ರಾಹುಲ್ ಮೇಲೆ ವಾಗ್ದಾಳಿ ನಡೆಸಿದ್ದರು.

ಐದು ವರ್ಷ, 60 ಭೇಟಿ:

2014 ಸೋಲಿನಲ್ಲೇ ಮುಂದಿನ ಚುನಾವಣೆಯ ಗೆಲುವನ್ನು ಸ್ಮೃತಿ ಕಂಡಿದ್ದರು. ಹೀಗಾಗಿ ಅಮೇಠಿಯಲ್ಲಿ ಕಮಲ ಬಾವುಟ ನೆಡುವ ಕಾರ್ಯಕ್ಕೆ ಚಾಲನೆ ನೀಡಿದ್ದರು. 2014ರಿಂದ 2019ರವರೆಗಿನ ಐದು ವರ್ಷದಲ್ಲಿ ಸ್ಮೃತಿ ಇರಾನಿ ಸುಮಾರು 60 ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಈ ಮೂಲಕ ಉತ್ತಮ ಜನಸಂಪರ್ಕವನ್ನು ಬೆಳೆಸಿದ್ದರು.

ಬೂಸ್ಟ್ ನೀಡಿದ 2017ರ ವಿಧಾನಸಭಾ ಗೆಲುವು:

ಲೋಕಸಭಾ ಚುನಾವಣೆ ನಡೆದ ಮೂರು ವರ್ಷದ ಬಳಿಕ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಅಮೇಠಿಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರವನ್ನು ಬಿಜೆಪಿ ತನ್ನದಾಗಿಸಿಕೊಂಡಿತ್ತು. ಇದು ಸಹಜವಾಗಿಯೇ ಬಿಜೆಪಿ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ನೀಡಿತ್ತು. ಜೊತೆಗೆ ತಮ್ಮ ಕಾರ್ಯ ವರ್ಕೌಟ್ ಆಗ್ತಿದೆ ಅನ್ನೋ ಸೂಚನೆ ದೊರೆತಿತ್ತು.

ಸ್ವಕ್ಷೇತ್ರದಲ್ಲೇ ಮುಗ್ಗರಿಸಿದ ರಾಹುಲ್! ಪ್ರಧಾನಿ ಅಭ್ಯರ್ಥಿಗೆ ಸೋಲುಣಿಸಿದ ಸ್ಮೃತಿ ಇರಾನಿ!

'ನಾಪತ್ತೆ ಸಂಸದ ರಾಗಾ'

ಅಮೇಠಿಯಲ್ಲಿ ಗೆದ್ದ ಬಳಿಕ ರಾಹುಲ್ ಗಾಂಧಿ ಕಳೆದ ಐದು ವರ್ಷದಲ್ಲಿ ಬೆರಳೆಣಿಕೆಷ್ಟು ಬಾರಿ ಮಾತ್ರವೇ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಇದನ್ನು ಸ್ಮೃತಿ ತಮ್ಮ ಪ್ರಚಾದಲ್ಲಿ ಸಮರ್ಪಕವಾಗಿ ಬಳಸಿಕೊಂಡರು.

ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ಓರ್ವ ನಾಪತ್ತೆಯಾದ ಸಂಸದ ಎಂದು ತೀವ್ರ ವಾಗ್ದಾಳಿ ನಡೆಸಿ ಅಮೇಠಿಗೆ ತಮ್ಮ ಅಗತ್ಯತೆ ಇದೆ ಎಂದು ಸಾರಿ ಹೇಳಿದರು. ಇದು ನಿಧಾನವಾಗಿ ಮತದಾರರು ಸ್ಮೃತಿಯತ್ತ ವಾಲುವಂತೆ ಮಾಡಿತು.

ಪ್ರತೀ ವಿಧಾನಸಭಾ ಕ್ಷೇತ್ರದಲ್ಲೂ ರಾಗಾ ಫೇಲ್​:

ಈ ಬಾರಿಯ ಚುನಾವಣೆಯಲ್ಲಿ ಸ್ಮೃತಿ ಇರಾನಿ ಸುಮಾರು 55,000 ಮತಗಳ ಅಂತರದಿಂದ ರಾಹುಲ್ ಗಾಂಧಿಯನ್ನು ಸೋಲಿಸಿದ್ದಾರೆ. ಐದು ವಿಧಾನಸಭಾ ಕ್ಷೇತ್ರಗಳ ಮತಗಳ ಅಂತರವನ್ನು ತೆಗೆದುಕೊಂಡರೆ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ಸ್ಮೃತಿ ಮುನ್ನಡೆ ಸಾಧಿಸದ್ದಾರೆ.

ಗೌರಿಗಂಜ್ ಕ್ಷೇತ್ರದಲ್ಲಿ 19,974 ಮತಗಳ ಮುನ್ನಡೆ, ಜಗ್​ದೀಶ್​ಪುರ ಕ್ಷೇತ್ರದಲ್ಲಿ 17,914 ಮತ, ತಿಲೋಯ್ ಕ್ಷೇತ್ರದಲ್ಲಿ 15,101 ಮತ, ಸಲೋನ್ ಕ್ಷೇತ್ರದಲ್ಲಿ 1,910 ಮತ ಹಾಗೂ ಅಮೇಠಿ ವಿಧಾನಸಭಾ ಕ್ಷೇತ್ರದಲ್ಲಿ 230 ಮತಗಳಿಂದ ರಾಹುಲ್ ಗಾಂಧಿಯನ್ನು ಹಿಂದಿಕ್ಕಿದ್ದರು.

ಅಮೇಠಿ ಕ್ಷೇತ್ರದ ಮೇಲ್ವರ್ಗ, ಹಿಂದುಳಿದ ಹಾಗೂ ದಲಿತರು ಈ ಬಾರಿ ರಾಹುಲ್ ಗಾಂಧಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದರು. ಪರಿಣಾಮ ಈ ಎಲ್ಲ ಮತಗಳು ಸ್ಮೃತಿ ಇರಾನಿಗೆ ಪಾಲಾದವು.

ಈ ಬಾರಿಯ ಲೋಕಸಮರದಲ್ಲಿ ಅಮೇಠಿ ಕ್ಷೇತ್ರ ತಮ್ಮ ಕೈ ತಪ್ಪಲಿದೆ ಎನ್ನುವುದು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರಿಗೆ ಚುನಾವಣೆಗೂ ಮೊದಲೇ ಗೊತ್ತಾಗಿತ್ತು ಎಂದು ಪಕ್ಷದ ಮೂಲಗಳು ಒಪ್ಪಿಕೊಳ್ಳುತ್ತಾರೆ.

Intro:Body:

ಐದು ವರ್ಷದ ತಪಸ್ಸು, 60 ಬಾರಿ ಕ್ಷೇತ್ರಕ್ಕೆ ಭೇಟಿ... ಛಲ ಬಿಡದೆ ಹೋರಾಡಿ ಗೆದ್ದ ಸ್ಮೃತಿ ಇರಾನಿ..!

ನವದೆಹಲಿ: ಉತ್ತರ ಪ್ರದೇಶದ ಅಮೇಠಿ ಎನ್ನುವ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಕಳೆದ ನಾಲ್ಕು ದಶಕದಿಂದ ಗಾಂಧಿ ಕುಟುಂಬದ ಹೊರತಾದ ಆಲೋಚನೆಯೇ ಇಲ್ಲಿ ಇರಲಿಲ್ಲ. ಇಂತಹ ಭದ್ರಕೋಟೆಯನ್ನು ಸ್ಮೃತಿ ಇರಾನಿ ಎನ್ನುವ ಗಟ್ಟಿಗಿತ್ತಿ ಭೇದಿಸಿ ಕಮಲ ಬಾವುಟವನ್ನು ನೆಟ್ಟಿದ್ದಾಳೆ.

2014ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಗೆ ಮೊದಲ ಬಾರಿಗೆ ಎದುರಾಗಿದ್ದು ಸ್ಮೃತಿ ಇರಾನಿ ಭರ್ಜರಿ ಫೈಟ್ ನೀಡಿದ್ದಳು. ಭಾರಿ ಅಂತರದಲ್ಲಿ ನಿರಾಯಾಸ ಗೆಲುವು ಸಾಧಿಸುತ್ತಿದ್ದ ರಾಗಾ 2014 ಲೋಕಸಮರದಲ್ಲಿ ಜಸ್ಟ್ ಒಂದು ಲಕ್ಷ ಅಂತರದಿಂದ ಪ್ರಯಾಸದ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ರಾಹುಲ್​ಗೆ ಸೋಲುಣಿಸಿರುವ ಸ್ಮೃತಿ ಇರಾನಿ ಗೆಲುವಿನ ನಗೆ ಬೀರಿದ್ದಾರೆ. ಈ ಗೆಲುವಿನ ಹಿಂದೆ ವರ್ಷಗಳ ಶ್ರಮ, ಹೋರಾಟವಿದೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...

ಹ್ಯಾಟ್ರಿಕ್​ ಗೆಲುವು ಸಾಧಿಸಿದ ಹೊರತಾಗಿಯೂ ರಾಹುಲ್ ಗಾಂಧಿ ಅಮೇಠಿ ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವಲ್ಲಿ ಸಂಪೂರ್ಣವಾಗಿ ಸೋತಿದ್ದರು. ಇದೇ ವಿಚಾರವನ್ನು ಪ್ರಮುಖ ಅಸ್ತ್ರವನ್ನಾಗಿಸಿಕೊಂಡ ಸ್ಮೃತಿ ಇರಾನಿ ಪ್ರಚಾರದಲ್ಲಿ ರಾಹುಲ್ ಮೇಲೆ ವಾಗ್ದಾಳಿ ನಡೆಸಿದ್ದರು.

ಐದು ವರ್ಷ, 60 ಭೇಟಿ:

2014 ಸೋಲಿನಲ್ಲೇ ಮುಂದಿನ ಚುನಾವಣೆಯ ಗೆಲುವನ್ನು ಸ್ಮೃತಿ ಕಂಡಿದ್ದರು. ಹೀಗಾಗಿ ಅಮೇಠಿಯಲ್ಲಿ ಕಮಲ ಬಾವುಟ ನೆಡುವ ಕಾರ್ಯಕ್ಕೆ ಚಾಲನೆ ನೀಡಿದ್ದರು. 2014ರಿಂದ 2019ರವರೆಗಿನ ಐದು ವರ್ಷದಲ್ಲಿ ಸ್ಮೃತಿ ಇರಾನಿ ಸುಮಾರು 60 ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಈ ಮೂಲಕ ಉತ್ತಮ ಜನಸಂಪರ್ಕವನ್ನು ಬೆಳೆಸಿದ್ದರು.

2017ರ ವಿಧಾನಸಭಾ ಗೆಲುವು:

ಲೋಕಸಭಾ ಚುನಾವಣೆ ನಡೆದ ಮೂರು ವರ್ಷದ ಬಳಿಕ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಅಮೇಠಿಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರವನ್ನು ಬಿಜೆಪಿ ತನ್ನದಾಗಿಸಿಕೊಂಡಿತ್ತು. ಇದು ಸಹಜವಾಗಿಯೇ ಬಿಜೆಪಿ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ನೀಡಿತ್ತು. ಜೊತೆಗೆ ತಮ್ಮ ಕಾರ್ಯ ವರ್ಕೌಟ್ ಆಗ್ತಿದೆ ಅನ್ನೋ ಸೂಚನೆ ದೊರೆತಿತ್ತು.

ನಾಪತ್ತೆ ಸಂಸದ ರಾಗಾ:

ಅಮೇಠಿಯಲ್ಲಿ ಗೆದ್ದ ಬಳಿಕ ರಾಹುಲ್ ಗಾಂಧಿ ಕಳೆದ ಐದು ವರ್ಷದಲ್ಲಿ ಬೆರಳೆಣಿಕೆಷ್ಟು ಬಾರಿ ಮಾತ್ರವೇ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಇದನ್ನು ಸ್ಮೃತಿ ತಮ್ಮ ಪ್ರಚಾದಲ್ಲಿ ಸಮರ್ಪಕವಾಗಿ ಬಳಸಿಕೊಂಡರು.

ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ಓರ್ವ ನಾಪತ್ತೆಯಾದ ಸಂಸದ ಎಂದು ತೀವ್ರ ವಾಗ್ದಾಳಿ ನಡೆಸಿ ಅಮೇಠಿಗೆ ತಮ್ಮ ಅಗತ್ಯತೆ ಇದೆ ಎಂದು ಸಾರಿ ಹೇಳಿದರು. ಇದು ನಿಧಾನವಾಗಿ ಮತದಾರರು ಸ್ಮೃತಿಯತ್ತ ವಾಲುವಂತೆ ಮಾಡಿತು.

ಪ್ರತೀ ವಿಧಾನಸಭಾ ಕ್ಷೇತ್ರದಲ್ಲೂ ರಾಗಾ ಫೇಲ್​:

ಈ ಬಾರಿಯ ಚುನಾವಣೆಯಲ್ಲಿ ಸ್ಮೃತಿ ಇರಾನಿ ಸುಮಾರು 55,000 ಮತಗಳ ಅಂತರದಿಂದ ರಾಹುಲ್ ಗಾಂಧಿಯನ್ನು ಸೋಲಿಸಿದ್ದಾರೆ. ಐದು ವಿಧಾನಸಭಾ ಕ್ಷೇತ್ರಗಳ ಮತಗಳ ಅಂತರವನ್ನು ತೆಗೆದುಕೊಂಡರೆ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ಸ್ಮೃತಿ  ಮುನ್ನಡೆ ಸಾಧಿಸದ್ದಾರೆ.

ಗೌರಿಗಂಜ್ ಕ್ಷೇತ್ರದಲ್ಲಿ 19,974 ಮತಗಳ ಮುನ್ನಡೆ, ಜಗ್​ದೀಶ್​ಪುರ ಕ್ಷೇತ್ರದಲ್ಲಿ 17,914 ಮತ, ತಿಲೋಯ್ ಕ್ಷೇತ್ರದಲ್ಲಿ 15,101 ಮತ, ಸಲೋನ್ ಕ್ಷೇತ್ರದಲ್ಲಿ 1,910 ಮತ ಹಾಗೂ ಅಮೇಠಿ ವಿಧಾನಸಭಾ ಕ್ಷೇತ್ರದಲ್ಲಿ 230 ಮತಗಳಿಂದ ರಾಹುಲ್ ಗಾಂಧಿಯನ್ನು ಹಿಂದಿಕ್ಕಿದ್ದರು.

ಅಮೇಠಿ ಕ್ಷೇತ್ರದ ಮೇಲ್ವರ್ಗ, ಹಿಂದುಳಿದ ಹಾಗೂ ದಲಿತರು ಈ ಬಾರಿ ರಾಹುಲ್ ಗಾಂಧಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದರು. ಪರಿಣಾಮ ಈ ಎಲ್ಲ ಮತಗಳು ಸ್ಮೃತಿ ಇರಾನಿಗೆ ಪಾಲಾದವು.

ಈ ಬಾರಿಯ ಲೋಕಸಮರದಲ್ಲಿ ಅಮೇಠಿ ಕ್ಷೇತ್ರ ತಮ್ಮ ಕೈ ತಪ್ಪಲಿದೆ ಎನ್ನುವುದು ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರಿಗೆ ಚುನಾವಣೆಗೂ ಮೊದಲೇ ಗೊತ್ತಾಗಿತ್ತು ಎಂದು ಪಕ್ಷದ ಮೂಲಗಳು ಒಪ್ಪಿಕೊಳ್ಳುತ್ತಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.