ನವದೆಹಲಿ: ಮಧ್ಯಪ್ರದೇಶದಲ್ಲಿ ನಡೆದ ರ‍್ಯಾಲಿಯೊಂದರಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದ್ದು, 48 ಗಂಟೆಯೊಳಗೆ ಉತ್ತರಿಸುವಂತೆ ಸೂಚಿಸಿದೆ.
ಏಪ್ರಿಲ್ 23ರಂದು ಮಧ್ಯಪ್ರದೇಶದ ಶಾದೂಲ್ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುವ ವೇಳೆ ರಾಹುಲ್ ಗಾಂಧಿ ಆಡಿದ್ದ ಕೆಲ ಪದಗಳು ಸದ್ಯ ಅವರನ್ನು ಸಂಕಷ್ಟಕ್ಕೆ ದೂಡಿದೆ.
ರಾಗಾ ಹೇಳಿದ್ದೇನು..?
ಪ್ರಧಾನಿ ಮೋದಿ ಹೊಸದೊಂದು ಕಾನೂನು ರಚನೆ ಮಾಡಿದ್ದಾರೆ. ಇದರ ಅನ್ವಯ ಬುಡಕಟ್ಟು ಜನರ ಮೇಲೆ ದಾಳಿ ಮಾಡಬಹುದು ಹಾಗೂ ಹೊಡೆದು ಸಾಯಿಸಬಹುದು ಎಂದು ರಾಹುಲ್ ಗಾಂಧಿ ಭಾಷಣದ ವೇಳೆ ಹೇಳಿದ್ದರು ಎನ್ನಲಾಗಿದೆ.
ಸದ್ಯ ಇಸಿ ನೋಟಿಸ್ ಜಾರಿ ಮಾಡಿ ಎರಡು ದಿನದೊಳಗೆ ಉತ್ತರ ಕೇಳಿದೆ. ರಾಹುಲ್ ಗಾಂಧಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.