ಹೈದರಾಬಾದ್: ವಿಶ್ವಕಪ್ನಲ್ಲಿ ಈಗಾಗಲೇ ನೂರಾರು ದಾಖಲೆ ಸೃಷ್ಟಿಯಾಗಿದ್ದು, ಅವು ವಿವಿಧ ಪ್ಲೇಯರ್ಗಳಿಂದ ಬ್ರೇಕ್ ಕೂಡ ಆಗಿವೆ. ಆದರೆ, 1996,1999 ಹಾಗೂ 2003ರಲ್ಲಿ ನಿರ್ಮಾಣಗೊಂಡಿರುವ ಈ ದಾಖಲೆ ಇಲ್ಲಿಯವರೆಗೆ ಯಾವುದೇ ಭಾರತೀಯ ಆಟಗಾರನಿಂದ ಅಳಿಸಿ ಹಾಕಲು ಸಾಧ್ಯವಾಗಿಲ್ಲ.
ಟೀಂ ಇಂಡಿಯಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 1996ರಲ್ಲಿ 523 ರನ್, 2003 ರಲ್ಲಿ 673 ರನ್ ಸಿಡಿಸಿ,ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, 1999 ರಲ್ಲಿ ದ್ರಾವಿಡ್ 461 ರನ್ ಗಳಿಸಿ ಇದೇ ರೆಕಾರ್ಡ್ ನಿರ್ಮಿಸಿದ್ದರು. ಆದರೆ ಈ ದಾಖಲೆ ನಿರ್ಮಾಣಗೊಂಡು 16 ವರ್ಷ ಕಳೆದರೂ ಇಲ್ಲಿಯವರೆಗೆ ಟೀಂ ಇಂಡಿಯಾದ ಯಾವುದೇ ಬ್ಯಾಟ್ಸ್ಮನ್ ಈ ದಾಖಲೆ ಮುರಿದಿಲ್ಲ.
2003ರಲ್ಲಿ ಸಚಿನ್ ತೆಂಡೂಲ್ಕರ್ 673 ರನ್ ಗಳಿಸಿದ್ದು, ಇದಾದ ಬಳಿಕ ನಡೆದ ವಿಶ್ವಕಪ್ನಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳಿಂದ ಅತಿ ಹೆಚ್ಚು ರನ್ ಮೂಡಿ ಬಂದಿಲ್ಲ. 2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದರೂ, ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ 500 ರನ್ ಗಳಿಸಿ ಟಾಪ್ ಸ್ಕೋರ್ ಎನಿಸಿಕೊಂಡಿದ್ದರು. ಈ ಟೂರ್ನಿಯಲ್ಲಿ ಸಚಿನ್ 9 ಪಂದ್ಯಗಳಿಂದ 482 ರನ್ ಗಳಿಸಿದ್ದರು.
ವಿಶ್ವಕಪ್ನ ಎರಡು ಸೀಸನ್ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರನೆಂಬ ಪಟ್ಟ ಸಚಿನ್ ಹೆಸರಿಗಿದ್ದು, ಇಲ್ಲಿಯವರೆಗೆ ಯಾವುದೇ ಪ್ಲೇಯರ್ಸ್ ಈ ದಾಖಲೆ ಅಳಿಸಿ ಹಾಕಿಲ್ಲ. ಇನ್ನು ಅತೀ ಹೆಚ್ಚು ಅಂದರೆ 6 ವಿಶ್ವಕಪ್ ಆಡಿರುವ ಸಚಿನ್ ಒಟ್ಟು 2278 ರನ್ಗಳಿಕೆ ಮಾಡಿದ್ದು, ಈ ದಾಖಲೆ ಕೂಡ ಇಲ್ಲಿಯವರೆಗೆ ಅಳಿಸಿ ಹಾಕಲು ಸಾಧ್ಯವಾಗಿಲ್ಲ.
ಸತತ ಮೂರು ವಿಶ್ವಕಪ್ನಲ್ಲಿ 1996,1999 ಹಾಗೂ 2003ರಲ್ಲಿ ಅತಿ ಹೆಚ್ಚು ರನ್ಗಳಿಸಿರುವ ಆಟಗಾರರು ಹಾಗೂ ತಂಡ ಎಂಬ ಹೆಗ್ಗಳಿಕೆಗೆ ಟೀಂ ಇಂಡಿಯಾ ಪಾತ್ರವಾಗಿದ್ದು, ಇಲ್ಲಿಯವರೆಗೆ ಈ ದಾಖಲೆ ಹಾಗೆಯೇ ಇದೆ.