ETV Bharat / briefs

ಜಿಲ್ಲೆಯಲ್ಲಿ 1,359 ವಿದ್ಯಾರ್ಥಿಗಳು ಇಂಗ್ಲಿಷ್​​ ಪರೀಕ್ಷೆಗೆ ಗೈರು! - ಚಿಕ್ಕೋಡಿ ಪಿಯುಸಿ ಪರೀಕ್ಷೆ

ಕೋವಿಡ್ ಭೀತಿಯ ನಡುವೆ ನಡೆದ ಪಿಯುಸಿ ಪರೀಕ್ಷೆಯಲ್ಲಿ ಚಿಕ್ಕೋಡಿ ತಾಲೂಕಿನಲ್ಲಿ 26,547 ವಿದ್ಯಾರ್ಥಿಗಳ ಪೈಕಿ 25,188 ವಿದ್ಯಾರ್ಥಿಗಳು ಹಾಜರಾಗಿದ್ದು,1,359 ವಿದ್ಯಾಥಿಗಳು ಗೈರಾಗಿದ್ದಾರೆ.

Puc English subjects exam hele in chikkodi

author img

By

Published : Jun 18, 2020, 10:32 PM IST

ಚಿಕ್ಕೋಡಿ : ಇಂದು ನಡೆದ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ 26,547 ವಿದ್ಯಾರ್ಥಿಗಳ ಪೈಕಿ 25,188 ವಿದ್ಯಾರ್ಥಿಗಳು ಹಾಜರಾಗಿದ್ದು,1,359 ವಿದ್ಯಾಥಿಗಳು ಗೈರು ಹಾಜರಾಗಿದ್ದಾರೆಂದು ಚಿಕ್ಕೋಡಿ ಡಿಡಿಪಿಯು ಸಂಜಯ ಕಾಂಬಳೆ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮಾರ್ಗಸೂಚಿಗನುಗುಣವಾಗಿ ಪರೀಕ್ಷೆ ನಡೆದಿದೆ. ಲಾಕ್‍ಡೌನ್‍ನಿಂದಾಗಿ ಸುಮಾರು ಎರಡು ತಿಂಗಳ ಕಾಲ ಮುಂದೂಡಲ್ಪಟ್ಟಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್​ ವಿಷಯದ ಪರೀಕ್ಷೆ ಇಂದು ನಡೆದು ಶೈಕ್ಷಣಿಕ ಸಾಲಿನ ಅಂತಿಮ ಪರೀಕ್ಷೆಗೆ ತೆರೆ ಬಿದ್ದಂತಾಗಿದೆ.
Puc English subjects exam hele in chikkodi
ಪಿಯುಸಿ ಇಂಗ್ಲಿಷ್ ವಿಷಯ ಪರೀಕ್ಷೆ ಬರೆದ ವಿದ್ಯಾರ್ಥಿಗಳು
ಕೊರೊನಾ ಭೀತಿಯ ನಡುವೆಯು ಸಹ ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಬರೆದು ನಿಟ್ಟುಸಿರು ಬಿಟ್ಟರು. ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಗೆ ಸ್ಯಾನಿಟೈಜರ್, ಮಾಸ್ಕ್ ನೀಡಲಾಯಿತು. ಆರೋಗ್ಯ ಇಲಾಖೆಯ ಕಾರ್ಯಕರ್ತರು ವಿದ್ಯಾರ್ಥಿಗಳ ಥರ್ಮಲ್ ಚೆಕ್ ಮಾಡಿದ ತಕ್ಷಣ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷಾ ಕೇಂದ್ರದ ಒಳಗಡೆ ಕಳುಹಿಸಲು ಪೋಲಿಸರು ನಿಗಾವಹಿಸಿದ್ದರು. ಹೆಚ್ವಿನ ಸಂಖ್ಯೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ತಮ್ಮ ಮಕ್ಕಳನ್ನು ಪಾಲಕರೇ ಕರೆದುಕೊಂಡು ಬಂದಿದ್ದಾರೆ. ವಾ.ಕ.ರಸ್ತೆ ಸಾರಿಗೆ ಸಂಸ್ಥೆ ಸಹ ಪರೀಕ್ಷಾ ಕೇಂದ್ರದವರೆಗೆ ವಿದ್ಯಾರ್ಥಿಗಳಿಗಾಗಿ ವಿಶೇಷ ಬಸ್ ವ್ಯವಸ್ಥೆಯನ್ನು ಮಾಡಿತು.

ಜಿಲ್ಲೆಯಲ್ಲಿ 1,359 ವಿದ್ಯಾರ್ಥಿಗಳು ಇಂಗ್ಲಿಷ್​​ ಪರೀಕ್ಷೆಗೆ ಗೈರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.