ಹೈದರಾಬಾದ್: ಮೈದಾನ ಒಳಗೆ ಹಾಗೂ ಹೊರಗೆ ಕೂಲ್ ಕೂಲ್ ವರ್ತನೆಯಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಟೀಮ್ ಇಂಡಿಯಾದ ಹಿರಿಯ ಆಟಗಾರ ಎಂ.ಎಸ್.ಧೋನಿಗೆ ಬಾಲಿವುಡ್ ಖ್ಯಾತ ನಟಿ ವಾರ್ನಿಂಗ್ ನೀಡಿದ್ದಾರೆ.
ದಿಗ್ಗಜ ಆಟಗಾರರಿಗೆ ಮೈದಾನದಲ್ಲಿ ಕೂಲಾಗಿ ಸೋಲಿನ ರುಚಿ ತೋರಿಸಿದ ಧೋನಿಗೇ ವಾರ್ನಿಂಗ್ ನೀಡಿದ್ದು ಯಾರದು ಎಂದು ಗಾಬರಿಯಾಗಬೇಡಿ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಒಡತಿ ಹಾಗೂ ನಟಿ ಪ್ರೀತಿ ಜಿಂಟಾ ಧೋನಿ ಪುತ್ರಿ ಜೀವಾಳ ಕ್ಯೂಟ್ನೆಸ್ಗೆ ಮನಸೋತು ಆಕೆಯನ್ನು ಕಿಡ್ನ್ಯಾಪ್ ಮಾಡುವುದಾಗಿ ಸ್ವೀಟ್ ವಾರ್ನಿಂಗ್ ನೀಡಿದ್ದಾರೆ.
- " class="align-text-top noRightClick twitterSection" data="
">
ಇನ್ಸ್ಟಾಗ್ರಾಮ್ನಲ್ಲಿ ಧೋನಿ ಜೊತೆಗಿರುವ ತಮ್ಮ ಫೋಟೋವನ್ನು ಶೇರ್ ಮಾಡಿರುವ ಪ್ರೀತಿ ಜಿಂಟಾ, ಕ್ಯಾಪ್ಟನ್ ಕೂಲ್ ನನ್ನನ್ನು ಸೇರಿದಂತೆ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ, ಪ್ರಸ್ತುತ ನನ್ನ ಗಮನ ಮುದ್ದಾದ ಜೀವಾ ಮೇಲೆ ಕೇಂದ್ರಿತವಾಗಿದೆ. ಧೋನಿ ಕೊಂಚ ಜಾಗರೂಕರಾಗಿರುವುದು ಉತ್ತಮ, ನಾನು ಜೀವಾಳನ್ನು ಅಪಹರಿಸುವ ಸಾಧ್ಯತೆ ಇದೆ ಎಂದು ಬರೆದಿದ್ದಾರೆ.
ಜೀವಾ ಕೆಲ ದಿನಗಳ ಹಿಂದೆ ಅಪ್ಪ- ಅಮ್ಮನಂತೆ ನೀವೂ ಸಹ ಮತದಾನದಲ್ಲಿ ಪಾಲ್ಗೊಂಡು ಕರ್ತವ್ಯ ಚಲಾಯಿಸಿ ಎಂದು ವಿಡಿಯೋ ಮೂಲಕ ಎಲ್ಲರಿಗೂ ಮುದ್ದಾಗಿ ಮನವಿ ಮಾಡಿದ್ದಳು. ಆಗಾಗ್ಗೆ ಇಂಟರ್ನೆಟ್ನಲ್ಲಿ ಎಲ್ಲರ ಗಮನ ಸೆಳೆಯುವ ಧೋನಿ ಪುತ್ರಿ ಜೀವಾ ಸದ್ಯ ಪ್ರೀತಿ ಜಿಂಟಾಳ ಹೃದಯ ಕದ್ದಿದ್ದಾಳೆ.