ನವದೆಹಲಿ: ಯುಎಸ್ನಲ್ಲಿನ ರಸ್ತೆಯೊಂದರಲ್ಲಿ ವಿಮಾನ ಲ್ಯಾಂಡ್ ಆಗಿರುವುದನ್ನು ನೋಡಿದ ನಟಿ ಪ್ರೀತಿ ಜಿಂಟಾ ಅವರು ತಮ್ಮ ಜೀವಿತಾವಧಿಯಲ್ಲಿ ನೋಡಿರುವ ಇಂಥ ಸನ್ನಿವೇಶ ಇದೇ ಮೊದಲು ಎಂದು ಬರೆದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ನಾನು ರಸ್ತೆಯಲ್ಲಿ ಕಾರು ಚಾಲನೆ ಮಾಡುವಾಗ ವಿಮಾನ ಇಳಿಯುತ್ತದೆ ಎಂದು ಯೋಚಿಸಿರಲಿಲ್ಲ. ದೇವರಿಗೆ ಧನ್ಯವಾದಗಳು, ಎಲ್ಲರೂ ಸುರಕ್ಷಿತವಾಗಿದ್ದಾರೆ. ಜೀವನದಲ್ಲಿ ಇದು ಒಂದೇ ಬಾರಿ ಎಂದು ಅವರು ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ. ಹಾಗೆ ವಿಮಾನ ರಸ್ತೆ ಮೇಲೆ ನಿಂತಿರುವ ವಿಡಿಯೋವನ್ನು ಕೂಡ ಶೇರ್ ಮಾಡಿದ್ದಾರೆ.
ಈ ವಿಡಿಯೋ ನೋಡಿ ನಟ ನರ್ಗಿಸ್ ಫಕ್ರಿ ಸೇರಿದಂತೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ನರ್ಗಿಸ್ ಈ ಪೋಸ್ಟ್ಗೆ ಸರಣಿ ಇಮೋಜಿಗಳನ್ನು ಹಾಕಿ ಪ್ರತಿಕ್ರಿಯಿಸಿದ್ದಾರೆ.