ಲೈಮಾ: ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಪೆರು ದೇಶದ ಮಾಜಿ ಅಧ್ಯಕ್ಷ ಅಲಾನ್ ಗ್ರೇಸಿಯಾ ಅವರು ಆತ್ಮಹತ್ಯಗೆ ಶರಣಾಗಿದ್ದಾರೆ.
ಭ್ರಷ್ಟಾಚಾರ ಆರೋಪ ಸಂಬಂದ ಪೊಲೀಸರು ತಮ್ಮನ್ನು ಬಂಧಿಸಲು ಮನೆ ಕಡೆಗೆ ಬರುತ್ತಿರುವುದನ್ನು ತಿಳಿದ ಅಲಾನ್ ಅವರು ತಮಗೆ ತಾವೇ ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಅಲಾನ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
ಅಲಾನ್ ಅವರು ತಮ್ಮ ವಿರುದ್ಧ ದಾಖಲಾಗಿದ್ದ ಭ್ರಷ್ಟಾಚಾರ ಆರೋಪವನ್ನು ತಳ್ಳಿಹಾಕಿದ್ದರು.
ಅಲಾನ್ ಅವರ ಸಾವಿಗೆ ಅಧ್ಯಕ್ಷ ಮಾರ್ಟಿನ್ ವಿಜ್ಕ್ರಾ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.