ಬಳ್ಳಾರಿ: ನಗರದ ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ ಸಾಂಸ್ಕೃತಿಕ ಉತ್ಸವವನ್ನು ಆಯೋಜನೆ ಮಾಡಲಾಗಿದ್ದು, ಚಿತ್ರಸೇನಾ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪಾಂಡುವಿಜಯ ಬಯಲು ನಾಟಕದ ಚಿತ್ರಸೇನಾ ಪಾತ್ರ ಜನರನ್ನು ಮಂತ್ರಮುಗ್ಧಗೊಳಿಸಿತು. ಸಂಯುಕ್ತ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ನವೀನ್ ಕುಮಾರ್ ಉತ್ತಮವಾಗಿ ಆಭಿನಯಿಸಿದ್ದು, ಜನರ ಮೆಚ್ಚುಗೆಗೆ ಪಾತ್ರರಾದರು. ನಂತರ ಮಾತನಾಡಿದ ವಿದ್ಯಾರ್ಥಿ, ಇದು ನನ್ನ ಮೊದಲನೇ ಪ್ರಯೋಗ, ಬೇರೆಯವರನ್ನು ನೋಡಿ ಎರಡು ವರ್ಷಗಳಿಂದ ನಾಟಕ ಮಾಡುವುದನ್ನು ಕಲಿತಿರುವೆ ಎಂದರು.
ಇನ್ನು ಏಕಪಾತ್ರಾಭಿನಯ ಮಾಡುವ ನವೀನ್ಗೆ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸರಾಥಿ ಪಂಪಾಪತಿ ಸಹ ಸಾಥ್ ನೀಡಿದರು.
ಮಾರ್ಚ್ 6 ರಂದು ವದ್ದಟ್ಟಿ ಗ್ರಾಮದಲ್ಲಿ ಮತ್ತೇ ಬಯಲುನಾಟಕ ಆಯೋಜಿಸಲಾಗಿದ್ದು, ಅಲ್ಲಿಯೂ ಅಭಿನಯಿಸುವುದಾಗಿ ತಿಳಿಸಿದ್ದಾರೆ. ನವೀನ್ ಆಭಿನಯಕ್ಕೆ ಪೋಷಕರು ಸಹ ಸಹಾಯ ಮಾಡಿದ್ದು, ಮಗನ ಪ್ರದರ್ಶನ ನೋಡಿ ಸಂತೋಷ ವ್ಯಕ್ತಪಡಿಸಿದರು.