ಬಿಶ್ಕೆಕ್(ಕಿರ್ಗಿಸ್ತಾನ): ಶಾಂಘೈ ಶೃಂಗಸಭೆ ನಿಮಿತ್ತ ಬಿಶ್ಕೆಕ್ನಲ್ಲಿರುವ ಪ್ರಧಾನಿ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಜೊತೆಗೆ ಮಾತುಕತೆ ನಡೆಸಿದ್ದಾರೆ.
ಪಾಕಿಸ್ತಾನ ಭಯೋತ್ಪಾದನಾ ರಹಿತ ವಾತಾವರಣ ನಿರ್ಮಾಣ ಮಾಡಬೇಕು. ಆದರೆ ಸದ್ಯದ ಸ್ಥಿತಿಯಲ್ಲಿ ಈ ವಾತಾವರಣ ಕಾಣಿಸುತ್ತಿಲ್ಲ. ಪಾಕಿಸ್ತಾನ ಈ ನಿಟ್ಟಿನಲ್ಲಿ ಗಮನಹರಿಸುತ್ತದೆ ಎನ್ನುವ ಆಶಾಭಾವ ಹೊಂದಿದ್ದೇವೆ ಎಂದು ಪ್ರಧಾನಿ ಮೋದಿ ಅವರು ಚೀನಾ ಅಧ್ಯಕ್ಷರ ಜೊತೆಗಿನ ಮಾತುಕತೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಶಾಂಘೈ ಶೃಂಗಸಭೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಹ ಭಾಗವಹಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಉಭಯ ದೇಶಗಳ ಪ್ರಧಾನಿಗಳ ನಡುವೆ ಯಾವುದೇ ರೀತಿಯ ಮಾತುಕತೆ ನಡೆದಿಲ್ಲ. ಈ ಇಬ್ಬರೂ ನಾಯಕರು ಹಸ್ತಲಾಘವ ಸಹ ಮಾಡಿಲ್ಲ.
ಸನಿಹವಿದ್ದರೂ ಅದೆಷ್ಟು ದೂರ! ಮೋದಿ-ಇಮ್ರಾನ್ ಪರಸ್ಪರ ನೋಡಲಿಲ್ಲ,ಮಾತಾಡಲಿಲ್ಲ
ಶೃಂಗಸಭೆಗೂ ಮುನ್ನ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಹಾಗೂ ಪ್ರಧಾನಿ ಇಮ್ರಾನ್ ಖಾನ್ ಪ್ರತ್ಯೇಕವಾಗಿ ಭಾರತದ ವಿದೇಶಾಂಗ ಇಲಾಖೆಗೆ ಪತ್ರ ಬರೆದು ಮಾತುಕತೆಯ ಮನವಿ ಮಾಡಿಕೊಂಡಿದ್ದರು. ಆದರೆ ಭಾರತ ಈ ಪತ್ರಕ್ಕೆ ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ.
-
Had an extremely fruitful meeting with President Xi Jinping. Our talks included the full spectrum of India-China relations.
— Narendra Modi (@narendramodi) June 13, 2019 " class="align-text-top noRightClick twitterSection" data="
We shall continue working together to improve economic and cultural ties between our nations. pic.twitter.com/JIPNS502I3
">Had an extremely fruitful meeting with President Xi Jinping. Our talks included the full spectrum of India-China relations.
— Narendra Modi (@narendramodi) June 13, 2019
We shall continue working together to improve economic and cultural ties between our nations. pic.twitter.com/JIPNS502I3Had an extremely fruitful meeting with President Xi Jinping. Our talks included the full spectrum of India-China relations.
— Narendra Modi (@narendramodi) June 13, 2019
We shall continue working together to improve economic and cultural ties between our nations. pic.twitter.com/JIPNS502I3