ದಾವಣಗೆರೆ: ಝೀರೊ ಟ್ರಾಫಿಕ್ ಮೂಲಕ ವಿಜಯನಗರ ಜಿಲ್ಲೆಯಿಂದ ಆಕ್ಸಿಜನ್ ಬಂದ ಹಿನ್ನೆಲೆ ಆತಂಕಕ್ಕೆ ಒಳಗಾಗಿದ್ದ ಜಿಲ್ಲಾಧಿಕಾರಿಗಳು ಮತ್ತು ಕೋವಿಡ್ ಸೋಂಕಿತರು ನಿಟ್ಟುಸಿರು ಬಿಟ್ಟಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿ ಆಗುವ ಆತಂಕ ಮನೆ ಮಾಡಿತ್ತು. ಇದರ ಬೆನ್ನಲ್ಲೇ ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ ದೌಡಾಯಿಸಿದ್ದರು. ಬಳ್ಳಾರಿಯ ಜಿಂದಾಲ್ ಘಟಕದಿಂದ ಆಕ್ಸಿಜನ್ ಬರೋದು ತಡವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಆಕ್ಸಿಜನ್ ಖಾಲಿಯಾಗೋ ಆತಂಕದಿಂದ ಖಾಸಗಿ ಆಸ್ಪತ್ರೆಗಳಿಂದ ಆಕ್ಸಿಜನ್ ಕಲೆ ಹಾಕುವ ಸಂದರ್ಭ ಎದುರಾಗಿತ್ತು.
ಸುಮಾರು ಎರಡ್ಮೂರು ಗಂಟೆ ಆಕ್ಸಿಜನ್ ಟ್ಯಾಂಕರ್ ತಡವಾಗಿದ್ದರಿಂದ, ಒಂದು ಗಂಟೆಯಿಂದ ಜಿಲ್ಲಾಸ್ಪತ್ರೆಯಲ್ಲೆ ಡಿಸಿ ಮೊಕ್ಕಾಂ ಹೂಡುವ ಮೂಲಕ 300ಕ್ಕೂ ಅಧಿಕ ರೋಗಿಗಳು ಆಕ್ಸಿಜನ್ ಮೇಲಿರೋದ್ರಿಂದ ಸ್ಥಳದಲ್ಲೆ ಇದ್ದು ಪರಿಶೀಲನೆ ನಡೆಸಿದರು.
ಜಿಲ್ಲಾಸ್ಪತ್ರೆಗೆ ಬಂದು ತಲುಪಿದ ಆಕ್ಸಿಜನ್..!
ಪೊಲೀಸ್ ಎಸ್ಕಾರ್ಟ್ ಮೂಲಕ ಟ್ಯಾಂಕರನ್ನು ಝೀರೋ ಟ್ರಾಫಿಕ್ನಲ್ಲಿ ವಿಜಯನಗರದ ಹೊಸಪೇಟೆಯ ತೋರಣಗಲ್ಲಿನಿಂದ ಆಕ್ಸಿಜನ್ ಟ್ಯಾಂಕರ್ ಬಂದು ತಲುಪಿದೆ. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಇನ್ನು ಟ್ಯಾಂಕರ್ ಬರುವವರೆಗೂ ಆತಂಕದಲ್ಲಿ ರೋಗಿಗಳು ಕಾಲ ಕಳೆದಿದ್ದು, ಸಕಾಲಕ್ಕೆ ಟ್ಯಾಂಕರ್ ಬರುವ ಮೂಲಕ ಆತಂಕ ದೂರ ಮಾಡಿತು.