ಹೈದರಾಬಾದ್: ಕೊರೊನಾ ಲಸಿಕೆ ಪಡೆಯುವ ಫೋಟೋಗಳನ್ನು ಇತ್ತೀಚೆಗೆ ಸೆಲೆಬ್ರಿಟಿಗಳು ಟ್ರೆಂಡ್ ಮಾಡಿಕೊಂಡಿದ್ದಾರೆ. ಇದೀಗ ಲಸಿಕೆ ಪಡೆಯುವಾಗ ಚಿತ್ರಗಳಿಗೆ ನೀಡಿದ ಪೋಸ್ ಬಗ್ಗೆ ನಟಿ ಆರತಿ ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿ ಸಕತ್ ಟ್ರೋಲ್ಗೆ ಒಳಗಾಗಿದ್ದಾರೆ. ಆರತಿ ಫೋಟೋಗೆ ಪ್ರತಿಕ್ರಿಯಿಸಿದ ರೀತಿಗೆ ನೆಟಿಜನ್‌ಗಳು ಓವರ್ ಆ್ಯಕ್ಟಿಂಗ್ ಮಾಡುವುದನ್ನು ನಿಲ್ಲಿಸುವಂತೆ ಹೇಳುತ್ತಿದ್ದಾರೆ.
ಮಂಗಳವಾರ, ಆರತಿ ತನ್ನಇನ್ಸ್ಟಾಗ್ರಾಂ ಖಾತೆಯಲ್ಲಿ ಲಸಿಕೆ ತೆಗೆದುಕೊಳ್ಳುತ್ತಿರುವ ಸರಣಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ತಾನು ಚುಚ್ಚುಮದ್ದಿಗೆ ತೀರಾ ಹೆದರುತ್ತೇನೆ ಎಂದು ಬಹಿರಂಗಪಡಿಸಿದ್ದಾರೆ. ಅಲ್ಲದೇ, ಎಲ್ಲರೂ ಲಸಿಕೆ ತೆಗೆದುಕೊಳ್ಳುವಂತೆ ಆಕೆ ಒತ್ತಾಯಿಸಿದ್ದಾರೆ.
- " class="align-text-top noRightClick twitterSection" data="
">
ಇನ್ಸ್ಟಾಗ್ರಾಂನಲ್ಲಿ 1 ಮಿಲಿಯನ್ಗೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ ಆರತಿ. ಆದರೆ, ಎಡವಟ್ಟಾಗಿದ್ದು ಇಲ್ಲಿ, ತಾನು ವ್ಯಾಕ್ಸಿನ್ ಪಡೆಯುತ್ತಿರುವ ಸಾಲು ಸಾಲು ಫೋಟೋ ಅಪ್ಲೋಡ್ ಮಾಡಿ ಆರತಿ ಸದ್ಯ ಟ್ರೋಲ್ಗೆ ಒಳಗಾಗಿದ್ದಾರೆ. ಕೈ ಮೇಲೆ ಟ್ಯಾಟೂ ಹಾಕೊಳ್ಳೊವಾಗ ನೋವಾಗದ ಈಕೆಗೆ ಒಂದು ಲಸಿಕೆ ಚುಚ್ಚಿಸಿಕೊಳ್ಳುವಾಗ ನೋವಾಯ್ತಂತೆ.. ಓವರ್ ಆ್ಯಕ್ಟಿಂಗ್ನ ಅಂಗಡಿ ಇವಳು ಎಂದು ಟೀಕಿಸಿದ್ದಾರೆ.
- " class="align-text-top noRightClick twitterSection" data="
">
ಸುಮ್ನೆ ಪ್ರಚಾರ ಪ್ರಿಯೆ ಈಕೆ, ನೌಟಂಕಿ ಮಾಡ್ತಾಳೆ... ಇಂತಹ ಪಬ್ಲಿಸಿಟಿನ ಮೊದ್ಲು ನಿಲ್ಸು ಅಂತ ಇನ್ನೊಬ್ಬರು ಟ್ರೋಲ್ ಮಾಡಿದ್ದಾರೆ.
ಕೈಯಲ್ಲಿ ಅಷ್ಟು ದೊಡ್ಡ ಹಚ್ಚೆ ಹಾಕುವಾಗ ಹೆದರಲಿಲ್ಲವೇ ? ಓವರ್ಆ್ಯಕ್ಟಿಂಗ್ನ ಅಂಗಡಿಯನ್ನೂ ಮೀರಿಸುವಂತಿದೆ ಈಕೆಯ ವರ್ತನೆ ಎಂದು ಇನ್ನೊಬ್ಬಾತ ಕಾಲೆಳೆದಿದ್ದಾನೆ.
ಟೆಲಿವಿಷನ್ ತಾರೆ ಆಶಾ ನೇಗಿ ಇಂತಹ ಲಸಿಕೆ ಪಡೆಯುವ ವಿಡಿಯೋಗಳು, ಫೋಟೋಗಳಿಗೆ ಪೋಸ್ ನೀಡುವ ಬಗ್ಗೆ ವಿಷಯ ಪ್ರಸ್ತಾಪಿಸಿದ್ದಾರೆ. ತಾರೆಯರು ಸೋಷಿಯಲ್ ಮೀಡಿಯಾದಲ್ಲಿ ಲಸಿಕೆ ಕುರಿತು ಜಾಗೃತಿ ಹರಡುವುದು ಒಳ್ಳೆಯದು. ಆದರೆ, ಅತಿಯಾಗಿ ತೋರಿಸಿಕೊಳ್ಳುವುದನ್ನು ನಿಲ್ಲಿಸಿ ಎಂದು ವಿನಂತಿಸಿದ್ದಾರೆ.