ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ವಾರಾಣಾಸಿ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ತೆಲಂಗಾಣದ 25 ಅರಿಶಿನ ಬೆಳೆಗಾರರಲ್ಲಿ 24 ಮಂದಿಯ ನಾಮಪತ್ರ ತಿರಸ್ಕೃತವಾಗಿದೆ.
ಇಸ್ತಾರಿ ಸುನ್ನಮ್ ನರ್ಸಯ್ಯ ಎನ್ನುವ ತೆಲಂಗಾಣದ ನಿಜಾಮಾಬಾದ್ ಮೂಲದ ಅರಿಶಿನ ಬೆಳೆಗಾರನ ನಾಮಪತ್ರ ಅಂಗೀಕೃತವಾಗಿದೆ.
ವಾರಾಣಾಸಿ ಕ್ಷೇತ್ರದಿಂದ ಚುನಾವಣೆ ಎದುರಿಸಲು ಬರೋಬ್ಬರಿ 119 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇವುಗಳಲ್ಲಿ 89 ನಾಮಪತ್ರ ತಿರಸ್ಕೃತವಾಗಿದೆ.
ತೆಲಂಗಾಣ ಹಾಗೂ ತಮಿಳುನಾಡಿನಿಂದ ಒಟ್ಟಾರೆ ನೂರು ಮಂದಿ ಅರಶಿನ ಬೆಳೆಗಾರರು ಮೋದಿ ವಿರುದ್ಧ ಅಖಾಡಕ್ಕಿಳಿದಿದ್ದರು.