ಚಿತ್ರದುರ್ಗ: ಐಎಂಎಯ ಕೋಟ್ಯಾಂತರ ಹಣ ವಂಚನೆ ಪ್ರಕರಣ ಮಾಸುವ ಮುನ್ನವೇ ಚಿತ್ರದುರ್ಗದಲ್ಲಿ ಮತ್ತೊಂದು ವಂಚನೆ ಜಾಲ ಬೆಳಕಿಗೆ ಬಂದಿದೆ.
ಚಿತ್ರದುರ್ಗ ನಗರದಲ್ಲಿದ್ದ ಗ್ರೇಟ್ ಫೋರ್ಟ್ ಮೈನಾರಿಟಿ ಮಲ್ಟಿ ಪರ್ಪಸ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿಂಗ್ ಸೊಸೈಟಿಯು 8.5 ಕೋಟಿ ಹಣವನ್ನು ವಂಚನೆ ಮಾಡಿದೆ. ಈ ಬ್ಯಾಂಕ್ನ ಎಂ.ಡಿ. ಶಕೀಲ್ ಅಹ್ಮದ್ ಮತ್ತು ಜಬೀ ಎನ್ನುವರಿಬ್ಬರು ಬಡವರನ್ನು ಗುರಿಯಾಗಿಸಿಕೊಂಡು ಸಾವಿರಾರ ಜನರ ಬಳಿ ಹಣ ದೋಚಿದ್ದಾರೆ ಎಂದು ವಂಚನೆಗೊಳಗಾದವರು ಆರೋಪಿಸಿದ್ದಾರೆ.
ಕ್ರೆಡಿಟ್ ಕೋ ಬ್ಯಾಂಕ್ನಿಂದ ವಂಚನೆಗೊಳಪಟ್ಟವರಲ್ಲಿ ಮುಸ್ಲಿಂರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಣ ವಾಪಸ್ ಕೊಡಿಸಿವಂತೆ ಶಾಸಕ ತಿಪ್ಪಾರೆಡ್ಡಿಗೆ ಭೇಟಿಯಾಗಿ ಮನವಿ ಮಾಡಿಕೊಂಡರು. ಇನ್ನೂ ಹಣ ಕಳೆದುಕೊಂಡವರ ಕಣ್ಣೀರಿನ ಕಥೆ ಕೇಳಿದ ಶಾಸಕ ತಿಪ್ಪಾರೆಡ್ಡಿ ಅವರು ನಗರ ಠಾಣೆಯ ಸಿಪಿಐ ಫೈಜುಲ್ಲಾ ಅವರನ್ನು ಕರೆಸಿ ವಂಚಕ ಶಕೀಲ್ ಆಹ್ಮದ್ನನ್ನು ಪತ್ತೆ ಹಚ್ಚುವಂತೆ ತಾಕೀತು ಮಾಡಿದರು.
ವಂಚನೆ ಪ್ರಕರಣ ನಡೆದು ಮೂರ್ನಾಲ್ಕು ತಿಂಗಳು ಕಳೆದಿದ್ದು, ಈ ಹಿಂದೆ ಹಣ ಕಳೆದುಕೊಂಡ ಜನರು ಎಸ್ಪಿ ಕಛೇರಿ ಮೇಟ್ಟಿಲೇರಿ ನ್ಯಾಯಕ್ಕಾಗಿ ಎಸ್ಪಿಯವರಲ್ಲಿ ಮನವಿ ಮಾಡಿಕೊಂಡಿದ್ದರು ಎಂದು ಈ ಸಂದರ್ಭದಲ್ಲಿ ತಿಳಿದು ಬಂದಿದೆ.