ETV Bharat / briefs

ಚಿನ್ನದ ಗಣಿ ಕ್ಯಾಂಪ್ ಏರಿಯಾದಲ್ಲಿ ಮತ್ತೊಂದು ಕೋವಿಡ್-19 ಪ್ರಕರಣ ವರದಿ

ಚಿನ್ನದ ಗಣಿ ಆಸ್ಪತ್ರೆ ವೈದ್ಯರ ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ..

One Corona cases found in raichuru
One Corona cases found in raichuru
author img

By

Published : Jun 26, 2020, 8:44 PM IST

ರಾಯಚೂರು : ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕ್ಯಾಂಪಿನಲ್ಲಿ ಮತ್ತೊಂದು ಕೋವಿಡ್ ಪ್ರಕರಣ ವರದಿಯಾಗಿದೆ.

ಕಾರ್ಮಿಕ ವರ್ಗದಲ್ಲಿ ಭಯದ ವಾತಾವರಣ ಮನೆ ಮಾಡಿದೆ. ಚಿನ್ನದ ಗಣಿ ಆಸ್ಪತ್ರೆ ವೈದ್ಯರ ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರನಿಗೆ ಕೋವಿಡ್-19 ಲಕ್ಷಣಗಳು ಕಂಡು ಬಂದ ಹಿನ್ನೆಲೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್-19 ಪೀಡಿತ ಈ ಮೊದಲು ಕ್ಷಯರೋಗಕ್ಕೆ ಚಿಕಿತ್ಸೆ ಪಡೆದಿದ್ದ ಎಂಬ ಮಾಹಿತಿ ಲಭ್ಯವಾಗಿದ್ದು, ಯಾರ ಸಂಪರ್ಕದಿಂದಲೂ ಸೋಂಕು ಹರಡಿತು ಎಂಬ ಅಂಶ ಕುತೂಹಲ ಮೂಡಿಸಿದೆ.

ಇದೇ ಸಂದರ್ಭದಲ್ಲಿ ರಾಯಚೂರು ಹೆಚ್ಚುವರಿ ಪೊಲೀಸ್ ವರುಷ್ಠಾಧಿಕಾರಿಗಳು ಅನ್ಯ ಕೆಲಸ ನಿಮಿತ್ತ ಚಿನ್ನದ ಗಣಿ ಅಧಿಕಾರಿಗಳ ಜೊತೆ ಗುಪ್ತ ಸಭೆ ನಡೆಸಿದ್ದು, ಭಾರಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಒಂದು ಮೂಲದ ಪ್ರಕಾರ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣ ಹರಡದಂತೆ ಮುತುವರ್ಜಿವಹಿಸುವ ಕುರಿತು ಚರ್ಚೆ ನಡೆದಿವೆ ಎಂದು ಮೂಲಗಳು ದೃಢಪಡಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.