ETV Bharat / briefs

ಬಂಡೀಪುರ ಅರಣ್ಯ ಪ್ರದೇಶದ ಪುನರುಜ್ಜೀವನಕ್ಕೆ ಹಣ ಬೆಂಬಲ ಅಗತ್ಯವಿಲ್ಲ: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ - ಬಂಡೀಪುರ ಅರಣ್ಯ ಪ್ರದೇಶ

ಬೆಂಕಿ ನೆಲಮಟ್ಟದಾಗಿದ್ದು, ಲಂಟಾನವು ಬೆಂಕಿಗೆ ಆಹುತಿಯಾಗಿದೆ. ಉಳಿದಂತೆ ನೆಲಮಟ್ಟದ ಭಗ್ನಾವಶೇಷ (ಕಸ, ಕಡ್ಡಿ, ಒಣ ಎಲೆ, ರೆಂಬೆ-ಕೊಂಬೆ) ಒಣಗಿ ಬಿದ್ದ ಮರಗಳು, ಕೆಲವು ಒಣಗಿದ ಹುಲ್ಲು ಸುಟ್ಟಿದೆ. ಆದರೆ, ನಿಂತ ಹಸಿರು ಮರಗಳು ಸುಟ್ಟಿಲ್ಲ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಬಂಡೀಪುರ
author img

By

Published : Apr 25, 2019, 4:09 AM IST

ಬೆಂಗಳೂರು: ಬಂಡೀಪುರ ಅರಣ್ಯ ಪ್ರದೇಶವನ್ನು ಪುನರುಜ್ಜೀವನಗೊಳಿಸಲು ಯಾವುದೇ ರೀತಿಯ ಹಣಕಾಸಿನ ಬೆಂಬಲ ಇಲಾಖೆಗೆ ಅಗತ್ಯವಿಲ್ಲ ಮತ್ತು ಹಣ ನೀಡುವಂತೆ ಯಾರಿಗೂ ಒತ್ತಾಯಿಸಿಲ್ಲ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಗೋಪಾಲಸ್ವಾಮಿ ಬೆಟ್ಟ ವಲಯದ ಪ್ರದೇಶಕ್ಕೆ ಫೆಬ್ರವರಿಯಲ್ಲಿ ಬೆಂಕಿ ಬಿದ್ದಿತ್ತು. ಹೆಚ್ಚಿನ ಬೆಂಕಿ ನೆಲಮಟ್ಟದಾಗಿದ್ದು, ಲಂಟಾನವು ಬೆಂಕಿಗೆ ಆಹುತಿಯಾಗಿದೆ. ಉಳಿದಂತೆ ನೆಲಮಟ್ಟದ ಭಗ್ನಾವಶೇಷ (ಕಸ, ಕಡ್ಡಿ, ಒಣ ಎಲೆ, ರೆಂಬೆ-ಕೊಂಬೆ) ಒಣಗಿ ಬಿದ್ದ ಮರಗಳು, ಕೆಲವು ಒಣಗಿದ ಹುಲ್ಲು ಸುಟ್ಟಿದೆ. ಆದರೆ, ನಿಂತ ಹಸಿರು ಮರಗಳು ಸುಟ್ಟಿಲ್ಲ.

Chief Conservator of Forests
ಪತ್ರಿಕಾ ಪ್ರಕಟಣೆ

ಬೆಂಕಿ ಅನಾಹುತದ ಪ್ರದೇಶಗಳಲ್ಲಿ ಎಲ್ಲಿಯೂ ಪ್ರಾಣಿಗಳು ಸತ್ತಿರುವ ಬಗ್ಗೆ ಕಂಡುಬಂದಿಲ್ಲ. ಇದಲ್ಲದೆ ಸ್ವಯಂ ಸೇವಕರಿಗೂ ಸಹ ಪ್ರಾಣಿಗಳು ಸತ್ತಿರುವ ಬಗ್ಗೆ ಗಮನಕ್ಕೆ ಬಂದಿಲ್ಲ. ಕೆಲವು ದುರುಳರು ಬೆಂಕಿಯಿಂದ ಎಲ್ಲ ಮರಗಳು ಮತ್ತು ಪ್ರಾಣಿಗಳು ಸುಟ್ಟಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಜೊತೆಗೆ ಈ ಪ್ರದೇಶದಲ್ಲಿ ಗಿಡ ನೆಡುವ ಮೂಲಕ ಪುನರುಜ್ಜೀವನಗೊಳಿಸಬೇಕು ಹಾಗೂ ಬೀಜದುಂಡೆಗಳನ್ನು ಬಿತ್ತನೆ ಮಾಡಬೇಕಾಗಿರುವುದಾಗಿ ತಪ್ಪು ಅಭಿಪ್ರಾಯ ಮೂಡಿಸುವುದರ ಜೊತೆಗೆ ಕೆಲವರು ಬೆಂಗಳೂರಿನಲ್ಲಿ ಬೀಜದುಂಡೆ ತಯಾರಿಸುವ ಕಾರ್ಯಕ್ರಮವನ್ನು ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಮೂಲಕ ನಿರ್ವಹಿಸುವುದಾಗಿ ಬಿಂಬಿಸುತ್ತಿದ್ದಾರೆ.

ಅಭಿವೃದ್ಧಿ ಹೆಸರಿನಲ್ಲಿ ಯಾರಾದರೂ ಹಣ ಸಂಗ್ರಹಣೆ ಮಾಡುತ್ತಿದ್ದರೆ, ಅದು ವಂಚನೆಯಾಗಿದೆ. ಬೆಂಕಿ ಕೇವಲ ನೆಲಮಟ್ಟದ ಬೆಂಕಿಯಾಗಿದೆ. ಒಂದೆರಡು ಮಳೆಯಾದ ಕೂಡಲೇ ಬಂಡೀಪುರ ಅರಣ್ಯ ಪ್ರದೇಶವು ಪುನರುಜ್ಜೀವನಗೊಂಡು ಹಸಿರಿನಿಂದ ಕಂಗೊಳಿಸುತ್ತದೆ. ಹೊರಗಿನವರನ್ನು ಸುಟ್ಟ ಪ್ರದೇಶಕ್ಕೆ ಬರಲು ಅಥವಾ ಮದ್ಯ ಪ್ರವೇಶಿಸಲು ಅನುಮತಿ ಇಲ್ಲ ಎಂದು ಅರಣ್ಯ ಪಡೆ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Intro:ಬೆಂಗಳೂರು : ಬಂಡೀಪುರ ಅರಣ್ಯ ಪ್ರದೇಶವನ್ನು ಪುನರುಜ್ಜೀವನಗೊಳಿಸಲು ಯಾವುದೇ ರೀತಿಯ ಹಣಕಾಸಿನ ಬೆಂಬಲ ಇಲಾಖೆಗೆ ಅಗತ್ಯವಿಲ್ಲ ಮತ್ತು ಹಣ ನೀಡುವಂತೆ ಯಾರಿಗೂ ಒತ್ತಾಯಿಸಿಲ್ಲ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.Body:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಗೋಪಾಲಸ್ವಾಮಿಬೆಟ್ಟ ವಲಯದ ಪ್ರದೇಶಕ್ಕೆ ಕಳೆದ ಫೆಬ್ರವರಿಯಲ್ಲಿ ಬೆಂಕಿ ಬಿದ್ದಿತ್ತು. ಹೆಚ್ಚಿನ ಬೆಂಕಿ ನೆಲಮಟ್ಟದಾಗಿದ್ದು, ಲಂಟಾನವು ಬೆಂಕಿಗೆ ಆಹುತಿಯಾಗಿದೆ. ಉಳಿದಂತೆ ನೆಲಮಟ್ಟದ ಭಗ್ನಾವಶೇಷ (ಕಸ, ಕಡ್ಡಿ, ಒಣ ಎಲೆ, ರಂಬೆ-ಕೊಂಬೆ) ಒಣಗಿ ಬಿದ್ದ ಮರಗಳು, ಕೆಲವು ಒಣಗಿದ ಹುಲ್ಲು ಸುಟ್ಟಿದೆ. ಆದರೆ, ನಿಂತ ಹಸಿರು ಮರಗಳು ಸುಟ್ಟಿಲ್ಲ. ಬೆಂಕಿ ಅನಾಹುತದ ಪ್ರದೇಶಗಳಲ್ಲಿ ಎಲ್ಲಿಯೂ ಪ್ರಾಣಿಗಳು ಸತ್ತಿರುವ ಬಗ್ಗೆ ಕಂಡುಬಂದಿಲ್ಲ. ಇದಲ್ಲದೆ ಸ್ವಯಂ ಸೇವಕರಿಗೂ ಸಹ ಪ್ರಾಣಿಗಳು ಸತ್ತಿರುವ ಬಗ್ಗೆ ಗಮನಕ್ಕೆ ಬಂದಿಲ್ಲ. ಕೆಲವು ದುರುಳರು ಬೆಂಕಿಯಿಂದ ಎಲ್ಲ ಮರಗಳು ಮತ್ತು ಪ್ರಾಣಿಗಳು ಸುಟ್ಟಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಜೊತೆಗೆ ಈ ಪ್ರದೇಶದಲ್ಲಿ ಗಿಡ ನೆಡುವ ಮೂಲಕ ಪುನರುಜ್ಜೀವನಗೊಳಿಸಬೇಕು ಹಾಗೂ ಬೀಜದುಂಡೆಗಳನ್ನು ಬಿತ್ತನೆ ಮಾಡಬೇಕಾಗಿರುವುದಾಗಿ ತಪ್ಪು ಅಭಿಪ್ರಾಯ ಮೂಡಿಸುವುದರ ಜೊತೆಗೆ ಕೆಲವರು ಬೆಂಗಳೂರಿನಲ್ಲಿ ಬೀಜದುಂಡೆ ತಯಾರಿಸುವ ಕಾರ್ಯಕ್ರಮವನ್ನು ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಮೂಲಕ ನಿರ್ವಹಿಸುವುದಾಗಿ ಬಿಂಬಿಸುತ್ತಿದ್ದಾರೆ.
ಅಭಿವೃದ್ಧಿ ಹೆಸರಿನಲ್ಲಿ ಯಾರಾದರೂ ಹಣ ಸಂಗ್ರಹಣೆ ಮಾಡುತ್ತಿದ್ದರೆ, ಅದು ವಂಚನೆಯಾಗಿದೆ. ಬೆಂಕಿ ಕೇವಲ ನೆಲಮಟ್ಟದ ಬೆಂಕಿಯಾಗಿದೆ. ಒಂದೆರಡು ಮಳೆಯಾದ ಕೂಡಲೇ ಬಂಡೀಪುರ ಅರಣ್ಯ ಪ್ರದೇಶವು ಪುನರುಜ್ಜೀವನಗೊಂಡು ಹಸಿರಿನಿಂದ ಕಂಗೊಳಿಸುತ್ತದೆ. ಹೊರಗಿನವರನ್ನು ಸುಟ್ಟ ಪ್ರದೇಶಕ್ಕೆ ಬರಲು ಅಥವಾ ಮದ್ಯ ಪ್ರವೇಶಿಸಲು ಅನುಮತಿ ಇಲ್ಲ ಎಂದು ಅರಣ್ಯ ಪಡೆ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.