ಮಂಚೇಶ್ವರ್(ಒಡಿಶಾ): ಮಾರಕ 'ಫಣಿ'ಗೆ ಒಡಿಶಾ ಸಂಪೂರ್ಣವಾಗಿ ತತ್ತರಿಸಿದ್ದು, ಜನರು ಭಾರಿ ಸಂಕಷ್ಟಕ್ಕೊಳಗಾಗಿದ್ದಾರೆ. ಇದರ ಮಧ್ಯೆ ಇಲ್ಲಿನ ರೈಲ್ವೆ ಆಸ್ಪತ್ರೆಯಲ್ಲಿ ಆಗತಾನೇ ಹುಟ್ಟಿದ ಮಗುವಿಗೆ, ಜನರ ಕಷ್ಟನಷ್ಟಗಳಿಗೆ ಕಾರಣವಾಗುತ್ತಿರುವ ಚಂಡಮಾರುತದ ಹೆಸರನ್ನೇ ನಾಮಕರಣ ಮಾಡಿರುವ ವಿಚಾರ ಎಲ್ಲರ ಹುಬ್ಬೇರಿಸಿದೆ.
ಒಡಿಶಾದ ಮಂಚೇಶ್ವರ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ 10:03ಕ್ಕೆ ಮಗುವೊಂದು ಜನಿಸಿದೆ. ಈ ಕಂದಮ್ಮನಿಗೆ ಪೋಷಕರು 'ಫಣಿ' ಎಂದು ಹೆಸರಿಟ್ಟಿದ್ದಾರೆ.
-
Bhubaneswar: A 32-year-old woman gave birth to a baby girl in Railway Hospital today at 11:03 AM. Baby has been named after the cyclonic storm, Fani. The woman is a railway employee, working as a helper at Coach Repair Workshop, Mancheswar. Both the mother&child are fine. #Odisha pic.twitter.com/xHGTkFPlAe
— ANI (@ANI) May 3, 2019 " class="align-text-top noRightClick twitterSection" data="
">Bhubaneswar: A 32-year-old woman gave birth to a baby girl in Railway Hospital today at 11:03 AM. Baby has been named after the cyclonic storm, Fani. The woman is a railway employee, working as a helper at Coach Repair Workshop, Mancheswar. Both the mother&child are fine. #Odisha pic.twitter.com/xHGTkFPlAe
— ANI (@ANI) May 3, 2019Bhubaneswar: A 32-year-old woman gave birth to a baby girl in Railway Hospital today at 11:03 AM. Baby has been named after the cyclonic storm, Fani. The woman is a railway employee, working as a helper at Coach Repair Workshop, Mancheswar. Both the mother&child are fine. #Odisha pic.twitter.com/xHGTkFPlAe
— ANI (@ANI) May 3, 2019
ಮಂಚೇಶ್ವರದಲ್ಲಿರುವ ಕೋಚ್ ರಿಪೇರ್ ವರ್ಕ್ಶಾಪ್ನಲ್ಲಿ ಮಗುವಿನ ತಂದೆ ಕೆಲಸ ನಿರ್ವಹಿಸುತ್ತಿದ್ದು, ಫಣಿ ಸೈಕ್ಲೋನ್ ಅಪ್ಪಳಿಸುವ ಸುಳಿವು ಪಡೆದು ಇವರು ತನ್ನ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಈ ಹಿಂದೆ ಕೂಡಾ ಇದೇ ರೀತಿಯ ವಿಚಿತ್ರ ಹೆಸರುಗಳನ್ನು ಪೊಷಕರು ತಮ್ಮ ಮಕ್ಕಳಿಗೆ ಇಟ್ಟಿರುವ ಉದಾಹರಣೆಗಳಿವೆ. ಜಿಎಸ್ಟಿ,ಕತ್ರೀನಾ ಎಂಬೆಲ್ಲಾ ಹೆಸರುಗಳೇ ಇದಕ್ಕೆ ನಿದರ್ಶನ.