ಕನ್ನಡ ಧಾರಾವಾಹಿಗಳ ಶೂಟಿಂಗ್ ಸದ್ಯ ಸ್ಥಗಿತಗೊಂಡಿದೆ. ಇದರ ನಡುವೆ ಮಗದೊಂದು ಡಬ್ಬಿಂಗ್ ಧಾರಾವಾಹಿ ನಂ. 1 ಸೊಸೆ ಇದೇ ಸೋಮವಾರದಿಂದ ಝೀ ವಾಹಿನಿಯಲ್ಲಿ ಆರಂಭವಾಗಲಿದೆ.
ಸೋಮವಾರದಿಂದ ಶುಕ್ರವಾರದ ತನಕ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗಲಿದೆ. ಈ ಶೋ ಅನಕ್ಷರಸ್ಥ ಮಹಿಳೆಯರ ವಿರುದ್ಧ ಬೇರೂರಿರುವ ಪೂರ್ವಾಗ್ರಹ ಹಾಗೂ ಪಕ್ಷಪಾತವನ್ನು ತೋರಿಸುತ್ತದೆ. ಅತ್ತೆ - ಸೊಸೆ ನಡುವಿನ ಸಂಬಂಧವನ್ನು ವಿವರಿಸುವ ಹೊಸ ಕಥೆ ಹೊಂದಿದ ಈ ಡಬ್ಬಿಂಗ್ ಧಾರಾವಾಹಿಯಲ್ಲಿ ಹಿರಿಯ ನಟಿ ಸುಧಾ ಚಂದ್ರನ್ ವಾಗ್ದೇವಿಯಾಗಿ ನಟಿಸಿದ್ದಾರೆ. ಈ ಧಾರಾವಾಹಿಯ ಮೂಲಕ 35 ವರ್ಷಗಳ ನಂತರ ತೆರೆಗೆ ಮರಳಿದ್ದು, ಡಬ್ಬಿಂಗ್ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೂ ಅವರು ಪ್ರವೇಶಿಸಿದ್ದಾರೆ. ಇನ್ನು ಸೊಸೆ ಸರಸ್ವತಿ ಪಾತ್ರವನ್ನು ನಟಿ ಮಧುಮಿತಾ ನಿರ್ವಹಿಸಿದ್ದಾರೆ. ಈ ಧಾರಾವಾಹಿ ಎರಡು ವಿಭಿನ್ನ ಮಹಿಳೆಯರ ಜಗತ್ತನ್ನು ಪ್ರಚುರಪಡಿಸುತ್ತದೆ.
ಈ ಶೋನ ಲಾಂಚ್ ಕುರಿತು ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಮಾತನಾಡಿದ್ದು "ನಾವು ಆಕರ್ಷಕವಾಗಿರುವ ಹಾಗೂ ಪ್ರಚೋದಿಸುವಂತಹ ವಿಷಯವನ್ನು ಒದಗಿಸಲು ಬದ್ದರಾಗಿದ್ದೇವೆ. ಇದರೊಂದಿಗೆ ನಾವು ನಂ 1 ಸೊಸೆ ಧಾರಾವಾಹಿಯನ್ನು ಪ್ರಾರಂಭಿಸಲು ಖುಷಿಪಡುತ್ತೇವೆ. ತನ್ನ ಕಥೆಯ ಮೂಲಕ ಈ ಧಾರಾವಾಹಿ ನಮ್ಮ ಸಮಾಜದಲ್ಲಿ ಬದಲಾವಣೆ ತರುತ್ತದೆ. ಅತ್ತೆ ಸೊಸೆಯ ಸಂಬಂಧವನ್ನು ವ್ಯಾಖ್ಯಾನಿಸುವ ಮೂಲಕ ಈ ಧಾರಾವಾಹಿಯನ್ನು ಎಲ್ಲರೂ ಇಷ್ಟಪಡುತ್ತಾರೆಂಬ ವಿಶ್ವಾಸ ಇದೆ" ಎಂದು ಹೇಳಿದ್ದಾರೆ.