ಚೆನ್ನೈ: ವೈದ್ಯಕೀಯ ಸಂಶೋಧನಾ ಕೇಂದ್ರವು ಕೇವಲ ಎರಡು ನಿಮಿಷಗಳಲ್ಲಿ ಕೊರೊನಾ ವೈರಸ್ ಅನ್ನು ಪತ್ತೆಹಚ್ಚುವ ಸಾಧನವನ್ನು ಕಂಡುಹಿಡಿದಿದೆ.
ಇದರ ಹೆಸರು ಕೆಜೆ ಕೋವಿಡ್ ಟ್ರ್ಯಾಕರ್ ಎಂದು. ಈ ಉಪಕರಣವನ್ನು ಕೆಜೆ ಆಸ್ಪತ್ರೆ ಮತ್ತು ಚೆನ್ನೈನ ಕೀಝಪಕ್ಕಂನಲ್ಲಿರುವ ಸ್ನಾತಕೋತ್ತರ ಸಂಶೋಧನಾ ಕೇಂದ್ರದಲ್ಲಿ ನ್ಯಾನೊ ತಂತ್ರಜ್ಞಾನದ ಸಹಾಯದಿಂದ ವಿನ್ಯಾಸಗೊಳಿಸಲಾಗಿದೆ. ಹ್ಯಾಂಡಿ ಕೋವಿಡ್ ಟ್ರ್ಯಾಕರ್ ಸಂವೇದಕಗಳೊಂದಿಗೆ ನಿರ್ಮಾಣ ಮಾಡಲಾಗಿದ್ದು, ಲ್ಯಾಪ್ಟಾಪ್ಗೆ ಸಂಪರ್ಕಿಸಲಾಗಿದೆ.
ಇದರ ಕೆಲಸ ಹೇಗೆ:
ವ್ಯಕ್ತಿಯ ಐದು ಬೆರಳುಗಳನ್ನು ಟ್ರ್ಯಾಕರ್ ಮೇಲೆ ಒತ್ತಲಾಗುತ್ತದೆ ಮತ್ತು ಎರಡು ನಿಮಿಷಗಳಲ್ಲಿ, ವ್ಯಕ್ತಿಯ ರಕ್ತದೊತ್ತಡ, ರಕ್ತದಲ್ಲಿನ ಆಮ್ಲಜನಕದ ಮಟ್ಟ, ದೇಹದ ಉಷ್ಣತೆ, ಹಿಮೋಗ್ಲೋಬಿನ್, ರಕ್ತ ಕಣಗಳ ಎಣಿಕೆ ಮತ್ತು ಜೆಟಾ ಸಂಭಾವ್ಯತೆ ಎಲ್ಲವನ್ನು ಗ್ರಹಿಸಿಕೊಳ್ಳುತ್ತದೆ. ನಂತರ ಡೇಟಾ ಸಂಭಾವ್ಯತೆಯ ಆಧಾರದ ಮೇಲೆ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಸುಲಭವಾಗಿ ಕಂಡು ಹಿಡಿಯಲಾಗುತ್ತದೆ.
ಕೆಜೆ ಆಸ್ಪತ್ರೆ ಮತ್ತು ಸ್ನಾತಕೋತ್ತರ ಸಂಶೋಧನಾ ಕೇಂದ್ರದ ಮುಖ್ಯಸ್ಥ ಕೇಶವನ್ ಜೆಗತೀಶನ್ ಈ ಕುರಿತು ಮಾತನಾಡಿ, ಈ ಉಪಕರಣವನ್ನು ಸರ್ಕಾರಿ ಆಸ್ಪತ್ರೆಗಳಲ್ಲಿನ ರೋಗಿಗಳಲ್ಲಿ ಬಳಸಲಾಗಿದೆ. ಕೊರೊನಾ ಸೋಂಕನ್ನು ಪತ್ತೆಹಚ್ಚುವಲ್ಲಿ ಇದು ಶೇಕಡಾ 100 ರಷ್ಟು ನಿಖರವಾಗಿದೆ ಎಂದು ಕಂಡು ಬಂದಿದೆ. ಸಾಂಕ್ರಾಮಿಕವಲ್ಲದ ಜನರನ್ನು ಪರೀಕ್ಷಿಸಲು ಸಹ ಇದು ಉಪಯುಕ್ತವಾಗಿದೆ. ವಾಸ್ತವವಾಗಿ, ಆರ್ಟಿ-ಪಿಸಿಆರ್ ಪರೀಕ್ಷೆಗಳಿಗಿಂತ ಹೆಚ್ಚು ವೇಗವಾಗಿ ಮತ್ತು ನಿಖರವಾಗಿ ಪರೀಕ್ಷೆ ನಡೆಸಲು ಈ ಸಾಧನವು ಉಪಯುಕ್ತವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕೊರೊನಾ ಸೋಂಕು ವೇಗವಾಗಿ ಹರಡುತ್ತಿರುವ ಈ ಸಮಯದಲ್ಲಿ, ಈ ಉಪಕರಣಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಬೇಕು. ಇದರಿಂದ ಕೊರೊನಾ ಸೋಂಕಿತ ಜನರು ಬೇಗನೆ ಪತ್ತೆಯಾಗುತ್ತಾರೆ ಮತ್ತು ತಕ್ಷಣವೇ ಸೋಂಕನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ.
ಕೆಜೆ ಆಸ್ಪತ್ರೆ ಮತ್ತು ಸ್ನಾತಕೋತ್ತರ ಸಂಶೋಧನಾ ಕೇಂದ್ರದ ವಿದ್ಯಾರ್ಥಿ ತೇಜಸ್ವಿ ಮಾತನಾಡಿ, ನಾವು ವಾಸ್ತವವಾಗಿ ಕ್ಯಾನ್ಸರ್ ಸಂಶೋಧನೆಯಲ್ಲಿ ಭಾಗಿಯಾಗಿದ್ದೆವು. ಆದರೆ ಈಗ ಕೊರೊನಾ ಎರಡನೇ ಅಲೆ ತೀವ್ರವಾಗಿದ್ದರಿಂದ ವೈದ್ಯಕೀಯ ಎಲೆಕ್ಟ್ರಾನಿಕ್ ತಂತ್ರಜ್ಞಾನದ ಸಹಾಯದಿಂದ ಈ ಯಂತ್ರವನ್ನು ವಿನ್ಯಾಸಗೊಳಿಸಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.