ಮಂಗಳೂರು: ದಕ್ಷಿಣ ಕನ್ನಡದಲ್ಲಿ ಪ್ರವಾಸಿಗರ ಆಕರ್ಷಣೆಯ ತಾಣವಾಗಿರುವ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ.
ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹಲವು ಜಾತಿಯ ಪಕ್ಷಿಗಳಿದ್ದು, ಇದೀಗ ಆಫ್ರಿಕನ್ ಬೂದು ಗಿಣಿ ಮತ್ತು ಅಲೆಕ್ಸಾಂಡ್ರಿನ್ ಗಿಣಿಗಳ ಸೇರ್ಪಡೆಯಾಗಿದೆ.
ಆಫ್ರಿಕನ್ ಬೂದು ಗಿಣಿ ಮತ್ತು ಅಲೆಕ್ಸಾಂಡ್ರಿನ್ ಗಿಣಿಯನ್ನು ಗುಜರಾತ್ನಿಂದ ತರಿಸಲಾಗಿದೆ. ಎರಡು ಆಫ್ರಿಕನ್ ಬೂದು ಗಿಣಿಗಳಿದ್ದು, ಇವುಗಳು ಇನ್ನೂ ಇಲ್ಲಿನ ಪರಿಸರಕ್ಕೆ ಹೊಂದಿಕೊಂಡಿಲ್ಲ. ಇವು ಭಾಷೆಯನ್ನು ತಿಳಿದುಕೊಂಡ ಗಿಣಿಗಳಾಗಿದ್ದು, ಗುಜರಾತ್ನಿಂದ ತರಿಸಲಾದ ಗಿಣಿಗಳ ಜೊತೆಗೆ ಹಿಂದಿಯಲ್ಲಿ ಸಂವಹನ ಮಾಡಬೇಕಾಗಿದೆ. ಅದೇ ರೀತಿ ಎರಡು ಅಲೆಕ್ಸಾಂಡ್ರಿನ್ ಗಿಣಿಗಳು ಬಂದಿದ್ದು, ಇವುಗಳನ್ನು ಹಿಂದಿನಿಂದ ಇಲ್ಲಿಯೇ ಇದ್ದ ಅಲೆಕ್ಸಾಂಡ್ರಿನ್ ಗಿಣಿಗಳ ಜೊತೆಗೆ ಇಡಲಾಗಿದೆ.
ಸದ್ಯ ಹೊಸ ಅತಿಥಿಗಳು ಪಿಲಿಕುಳ ಉದ್ಯಾನವನಕ್ಕೆ ಬರುವ ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದೆ.