ಹೈದರಾಬಾದ್: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಜಂಟಿ ಮಾಲೀಕ ನೆಸ್ ವಾಡಿಯಾಗೆ ಜಪಾನಿನ ಸಪರೋ ಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಈ ಆದೇಶ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಉತ್ತರ ಜಪಾನಿನ ಹೊಕೈಡೋ ದ್ವೀಪದ ಚಿಂಟೋಸ್ ವಿಮಾನ ನಿಲ್ದಾಣವೊಂದರಲ್ಲಿ 25 ಗ್ರಾಂ ಡ್ರಗ್ಸ್ ಜೊತೆಗೆ ಸಿಕ್ಕಿಬಿದ್ದಿದ್ದ ನೆಸ್ ವಾಡಿಯಾಗೆ ಮಂಗಳವಾರ ಶಿಕ್ಷೆ ಪ್ರಮಾಣ ಪ್ರಕಟವಾಗಿತ್ತು.
ಐಪಿಎಲ್ ನಿಯಮದ ಪ್ರಕಾರ ಐಪಿಎಲ್ ತಂಡದ ಯಾವುದೇ ಅಧಿಕಾರಿಗಳು ಮೈದಾನದ ಒಳಗೆ ಅಥವಾ ಹೊರಗೆ ತಂಡದ ಗೌರವಕ್ಕೆ ಧಕ್ಕೆ ತರುವ ಕಾರ್ಯವೆಸಗಿ ಅದು ಸಾಬೀತಾದಲ್ಲಿ ತಂಡವನ್ನು ನಿಷೇಧಿಸಬಹುದು.
ನೆಸ್ ವಾಡಿಯಾ ಪಂಜಾಬ್ ತಂಡದ ಸಹ ಮಾಲೀಕರಾಗಿರುವುದರಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಭವಿಷ್ಯ ಏನಾಗಲಿದೆ ಎನ್ನುವುದು ಮುಂದಿರುವ ಕುತೂಹಲ.