ETV Bharat / briefs

ಜಮೀನಿಗೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಬಂದ್​ - National Highway Construction Works Band from farmer

ಹೆದ್ದಾರಿ‌ ನಿರ್ಮಾಣ ಕಾಮಗಾರಿ‌ ಹಿನ್ನೆಲೆ ಬೆಳ್ಳಂಬೆಳಗ್ಗೆಯೇ ಜೆಸಿಬಿಗಳು ಸದ್ದು‌ ಮಾಡಲಾರಂಭಿಸಿದ್ದು, ಅವುಗಳನ್ನ ತಡೆ ಹಿಡಿದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

national-highway-construction-works-band-from-farmer
national-highway-construction-works-band-from-farmer
author img

By

Published : Jan 20, 2020, 10:37 AM IST

Updated : Jan 20, 2020, 9:09 PM IST

ರಾಮನಗರ: ಹೆದ್ದಾರಿ‌ ನಿರ್ಮಾಣ ಕಾಮಗಾರಿ‌ ಹಿನ್ನೆಲೆ ಬೆಳ್ಳಂಬೆಳಗ್ಗೆಯೇ ಜೆಸಿಬಿಗಳು ಸದ್ದು‌ ಮಾಡಲಾರಂಭಿಸಿದ್ದು, ಅವುಗಳನ್ನ ತಡೆ ಹಿಡಿದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಮೈಸೂರು ಬೈಪಾಸ್ ಹೆದ್ದಾರಿ ನಿರ್ಮಾಣ ಕಾಮಗಾರಿ‌ ನಡೆಯುತ್ತಿದ್ದು, ವಿಜಯಪುರ, ದೊಡ್ಡಮಣ್ಣುಗುಡ್ಡೆ ಮಾರ್ಗವಾಗಿ ನಡೆಯುತ್ತಿದ್ದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಸ್ಥಳೀಯ ಗ್ರಾಮಸ್ಥರು ಮತ್ತು ರೈತರು ಜೆಸಿಬಿ ತಡೆದು ವಿರೋಧ ವ್ಯಕ್ತಪಡಿಸಿದ್ದಾರೆ. ರಸ್ತೆ ಕಾಮಗಾರಿ ರೈತರ ಜಮೀನಿನ ಮೇಲೆ ಹಾದುಹೋಗುತ್ತಿದೆ. ಆದರೆ ರೈತರ ಜಮೀನಿಗೆ ಸೂಕ್ತ ಪರಿಹಾರ ನೀಡದೆ ರಸ್ತೆ ಕಾಮಗಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ರೈತರು ರಸ್ತೆ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಬಂದ್

ಯಾವುದೇ ಕಾರಣಕ್ಕೂ ಸೂಕ್ತ ಪರಿಹಾರ ಕೊಡುವವರೆಗೂ ಕಾಮಗಾರಿ ಕೆಲಸ ನಡೆಯಬಾರದೆಂದು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ರಾಮನಗರ ಪೊಲೀಸರು ದೌಡಾಯಿಸಿ ರೈತರ ಜೊತೆಗೆ ಮಾತುಕತೆ ನಡೆಸಿದರು. ಪೊಲೀಸರ ಮನವಿಗೂ ಬಗ್ಗದೆ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಇದೇ ವೇಳೆ ಪರಿಹಾರ ನೀಡಿದ ಬಳಿಕ‌ ಕಾಮಗಾರಿ‌ ಆರಂಭಿಸುವಂತೆ ರೈತರು ಪಟ್ಟು ಹಿಡಿದು ಜೆಸಿಬಿ, ಇಟಾಚಿಗಳ ಕಾಮಗಾರಿ‌ ನಿಲ್ಲಿಸಿದ್ದಾರೆ.

Intro:Body:ರಾಮನಗರ: ರೈತರ ಜಮೀನುಗಳಲ್ಲಿ ವಿಜಯಪುರ, ದೊಡ್ಡಮಣ್ಣುಗುಡ್ಡೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಸ್ಥಳೀಯ ಗ್ರಾಮಸ್ಥರು ಜೆಸಿಬಿ ತಡೆದು ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಮೈಸೂರು ಬೈಪಾಸ್ ಹೆದ್ದಾರಿ ನಿರ್ಮಾಣ ಕಾಮಗಾರಿ‌ ಜರುಗುತ್ತಿದ್ದು ರೈತರ ಜಮೀನಿನ ಮೇಲೆ ಹಾದು ಹೋಗುತ್ತಿದ್ದು ರೈತರ ಜಮೀನಿಗೆ ಸೂಕ್ತ ಪರಿಹಾರ ನೀಡದೆ ರಸ್ತೆ ಕಾಮಗಾರಿ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿಗೆ ರೈತರ ವಿರೋಧ ವ್ಯಕ್ತಪಡಿಸಿದ್ದಾರೆ.
ಹೆದ್ದಾರಿ‌ನಿರ್ಮಾಣ ಕಾಮಗಾರಿ‌ಗೆ ಬೆಳ್ಳಂಬೆಳಗ್ಗೆಯೇ ಜೆಸಿಬಿಗಳು ಸದ್ದು‌ಮಾಡಲಾರಂಬಿಸಿದ್ದವು ಅವುಗಳನ್ನ ತಡೆದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಸೂಕ್ತ ಪರಿಹಾರ ಕೊಡುವವರೆಗೂ ಕಾಮಗಾರಿ ಕೆಲಸ ನಡೆಯಬಾರದೆಂದು ಪಟ್ಟು ಹಿಡಿದಿದ್ದರು.
ಸ್ಥಳಕ್ಕೆ ರಾಮನಗರ ಪೊಲೀಸರು ದೌಡಾಯಿಸಿ ರೈತರ ಜೊತೆಗೆ ಮಾತುಕತೆ ನಡೆಸಿದರು , ಪೊಲೀಸರ ಮನವಿಗೂ ಬಗ್ಗದೆ
ರಸ್ತೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ರೈತರ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಮಡೆಯಿತು. ಇದೇ ವೇಳೆ ಪರಿಹಾರ ನೀಡಿದ ಬಳಿಕ‌ ಕಾಮಗಾರಿ‌ ಆಮಬಿಸುವಂತೆ ರೈತರು ಪಟ್ಟು ಹಿಡಿದು ಜೆಸಿಬಿ, ಇಟಾಚಿ ಗಳ ಕಾರ್ಯವನ್ನ ನಿಲ್ಲಿಸಿದರು.Conclusion:
Last Updated : Jan 20, 2020, 9:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.