ETV Bharat / briefs

ಮೋದಿ ಬಾಯಿತಪ್ಪಿ ಹೇಳಿದ ಮಾತಲ್ಲ ಇದು... ಅರಿವಿದ್ದೇ ಮಾಡಿದ ಆರೋಪವಿದು...!

ಈ ಮಾತು ಪ್ರಧಾನಿ ಮೋದಿ ಅವರನ್ನ ಇಕ್ಕಟ್ಟಿಗೆ ಸಿಲುಕಿಸುತ್ತದೆ ಎಂದೇ ಎಲ್ಲ ಮಾಧ್ಯಮಗಳು ವಿಶ್ಲೇಷಣೆ ಮಾಡಿದ್ದವು. ಆದರೆ ಇಂದು ಜಾರ್ಖಂಡ್ ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ಮತ್ತೊಮ್ಮೆ ರಾಜೀವ್​ ಗಾಂಧಿ ಹಾಗೂ  ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

author img

By

Published : May 6, 2019, 6:48 PM IST

ಮೋದಿ

ರಾಂಚಿ: ಪ್ರಧಾನಿ ನರೇಂದ್ರ ಮೋದಿ ಮೊತ್ತೊಮ್ಮೆ ಮಾಜಿ ಪ್ರಧಾನಿ ರಾಜೀವ್​ ಗಾಂಧಿ ವಿರುದ್ಧ ಅವರ ಹೆಸರು ಹೇಳದೇ ಹರಿಹಾಯ್ದಿದ್ದಾರೆ. ಮೊನ್ನೆಯಷ್ಟೇ ರಾಜೀವ್​ ಗಾಂಧಿ ಭ್ರಷ್ಟಾಚಾರದ ಆರೋಪ ಹೊತ್ತೇ ಮೃತಪಟ್ಟಿದ್ದರು ಎಂದು ಆರೋಪಿಸಿದ್ದರು.

ಈ ಮಾತು ಪ್ರಧಾನಿ ಮೋದಿ ಅವರನ್ನ ಇಕ್ಕಟ್ಟಿಗೆ ಸಿಲುಕಿಸುತ್ತದೆ ಎಂದೇ ಎಲ್ಲ ಮಾಧ್ಯಮಗಳು ವಿಶ್ಲೇಷಣೆ ಮಾಡಿದ್ದವು. ಆದರೆ ಇಂದು ಜಾರ್ಖಂಡ್ ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ಮತ್ತೊಮ್ಮೆ ರಾಜೀವ್​ ಗಾಂಧಿ ಹಾಗೂ ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ

ಅಷ್ಟೇ ಅಲ್ಲ ಬಹಿರಂಗ ಚರ್ಚೆಗೆ ಬರುವಂತೆ ಪಂಥಾಹ್ವಾನ ನೀಡಿದ್ದು, ಇದು ಇಂದಿನ ಯುವ ಪೀಳಿಗೆಗೆ ಗೊತ್ತಾಗಲಿ. ಗಾಂಧಿ ಕುಟುಂಬ ದೇಶವನ್ನ ಹೇಗೆಲ್ಲ ಕೊಳ್ಳೆ ಹೊಡೆದಿದ್ದಾರೆ ಎನ್ನುವುದು ಗೊತ್ತಾಗಲಿ ಎಂದು ಹೇಳಿದ್ದಾರೆ.

ರಾಜೀವ್​ ಗಾಂಧಿ ವಿರುದ್ಧ ಪ್ರಧಾನಿ ಮಾಡಿದ್ದ ಆರೋಪಕ್ಕೆ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ತೀವ್ರ ಪ್ರತ್ಯುತ್ತರ ಕೊಟ್ಟಿದ್ದರು. ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿ ಪ್ರಧಾನಿ ಮಾತಿನ ಲಯ ತಪ್ಪುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

ಪ್ರಧಾನಿ ಈ ಮಾತು, ಸಂಕಷ್ಟಕ್ಕೆ ಸಿಲುಕಿಸುತ್ತದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿತ್ತು. ಆದರೆ, ಇದೇ ವಿಷಯವನ್ನ ಪ್ರಸ್ತಾಪಿಸಿರುವ ಮೋದಿ, ರಾಜೀವ್​ ಗಾಂಧಿ ಭ್ರಷ್ಟ ಎಂದಿದ್ದಕ್ಕೆ ಇಷ್ಟೊಂದು ಚೀರಾಟ ಹಾರಾಟ ಏಕೆ ಎಂದು ಪ್ರಶ್ನಿಸುವ ಮೂಲಕ ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿದ್ದಾರೆ.

Intro:Body:

ಮೋದಿ ಬಾಯಿತಪ್ಪಿ ಹೇಳಿದ ಮಾತಲ್ಲವಿದು... ಅರಿವಿದ್ದೇ ಮಾಡಿದ ಆರೋಪವಿದು...!! 

ರಾಂಚಿ:  ಪ್ರಧಾನಿ ನರೇಂದ್ರ ಮೋದಿ ಮೊತ್ತೊಮ್ಮೆ ಮಾಜಿ ಪ್ರಧಾನಿ ರಾಜೀವ್​ ಗಾಂಧಿ ವಿರುದ್ಧ ಅವರ ಹೆಸರು ಹೇಳದೇ ಹರಿಹಾಯ್ದಿದ್ದಾರೆ.   ಮೊನ್ನೆಯಷ್ಟೇ ರಾಜೀವ್​ ಗಾಂಧಿ ಭ್ರಷ್ಟಾಚಾರದ ಆರೋಪ ಹೊತ್ತೇ ಮೃತಪಟ್ಟಿದ್ದರು ಎಂದು ಆರೋಪಿಸಿದ್ದರು.  

ಈ ಮಾತು ಪ್ರಧಾನಿ ಮೋದಿ ಅವರನ್ನ ಇಕ್ಕಟ್ಟಿಗೆ ಸಿಲುಕಿಸುತ್ತದೆ ಎಂದೇ ಎಲ್ಲ ಮಾಧ್ಯಮಗಳು ವಿಶ್ಲೇಷಣೆ ಮಾಡಿದ್ದವು. ಆದರೆ ಇಂದು ಜಾರ್ಖಂಡ್ ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ,  ಮತ್ತೊಮ್ಮೆ ರಾಜೀವ್​ ಗಾಂಧಿ ಹಾಗೂ  ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

 ಅಷ್ಟೇ ಅಲ್ಲ ಬಹಿರಂಗ ಚರ್ಚೆಗೆ ಬರುವಂತೆ ಪಂತಾಹ್ವಾನ ನೀಡಿದ್ದು, ಇದು ಇಂದಿನ ಯುವ ಪೀಳಿಗೆಗೆ ಗೊತ್ತಾಗಲಿ.   ಗಾಂಧಿ ಕುಟುಂಬ ದೇಶವನ್ನ ಹೇಗೆಲ್ಲ ಕೊಳ್ಳೆ ಹೊಡೆದಿದ್ದಾರೆ ಎನ್ನುವುದು ಗೊತ್ತಾಗಲಿ ಎಂದು ಹೇಳಿದ್ದಾರೆ.  

ರಾಜೀವ್​ ಗಾಂಧಿ ವಿರುದ್ಧ ಪ್ರಧಾನಿ ಮಾಡಿದ್ದ ಆರೋಪಕ್ಕೆ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ತೀವ್ರ ಪ್ರತ್ಯುತ್ತರ ಕೊಟ್ಟಿದ್ದರು.  ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿ ಪ್ರಧಾನಿ ಮಾತಿನ ಲಯ ತಪ್ಪುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.  

ಪ್ರಧಾನಿ ಈ ಮಾತು,  ಸಂಕಷ್ಟಕ್ಕೆ ಸಿಲುಕಿಸುತ್ತದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿತ್ತು. ಆದರೆ, ಇದೇ ವಿಷಯವನ್ನ ಪ್ರಸ್ತಾಪಿಸಿರುವ ಮೋದಿ,  ರಾಜೀವ್​ ಗಾಂಧಿ ಭ್ರಷ್ಟ ಎಂದಿದ್ದಕ್ಕೆ ಇಷ್ಟೊಂದು ಚೀರಾಟ ಹಾರಾಟ ಏಕೆ ಎಂದು ಪ್ರಶ್ನಿಸುವ ಮೂಲಕ ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.