ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯ ಮಹಾಹಬ್ಬ ಲೋಕಸಭಾ ಚುನಾವಣೆಯಲ್ಲಿ ಮತದಾನದಲ್ಲಿ ಎಲ್ಲರೂ ಉತ್ಸಾಹದಲ್ಲಿ ಪಾಲ್ಗೊಳ್ಳುತ್ತಿರುವ ಸಂದರ್ಭದಲ್ಲಿ ದೂರದ ಹಾಂಕಾಂಗ್ನಿಂದ ಬೆಂಗಳೂರಿಗೆ ಬಂದಿದ್ದ ದಂಪತಿಗೆ ನಿರಾಸೆಯಾಗಿದೆ.
ಮತದಾನಕ್ಕಾಗಿ ಹಾಂಕಾಂಗ್ನಿಂದ ಬಂದಿದ್ದ ದಂಪತಿಗಳ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿರುವುದು ಬೇಸರಕ್ಕೆ ಕಾರಣವಾಯಿತು. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಮತದಾನಕ್ಕೆ ಚುನಾವಣಾಧಿಕಾರಿ ಅನುಮತಿ ನೀಡಲಿಲ್ಲ.
ಈ ಘಟನೆ ಬೆಂಗಳೂರಿನ ಉತ್ತರ ಲೋಕಸಭಾ ಕ್ಷೇತ್ರದ ಮಹಾಲಕ್ಷ್ಮಿ ಲೇಔಟ್ ವಿ.ಸ ಕ್ಷೇತ್ರದ ಬೂತ್ ಸಂಖ್ಯೆ 170ರಲ್ಲಿ ನಡೆದಿದ್ದು, ಹಾಂಕಾಂಗ್ ಮೂಲದ ರಮೇಶ್ -ವಾಣಿ ದಂಪತಿ ತೀವ್ರ ನಿರಾಸೆಗೊಂಡಿದ್ದಾರೆ. ಶಾಸಕ ಗೋಪಾಲಯ್ಯರ ಮನೆಗೆ ಹೋಗಿ ವಿಚಾರಿಸಿದ್ರು ಪ್ರಯೋಜನವಾಗದೆ ವಾಪಸಾಗಿದ್ದು ವೋಟ್ ಮಾಡಲು ಅವಕಾಶ ಸಿಗದಿದ್ದರೆ ಚುನಾವಣಾ ಆಯೋಗಕ್ಕೆ ದೂರು ನೀಡುವ ನಿರ್ಧಾರಕ್ಕೆ ಬಂದಿದ್ದಾರೆ.