ಮುಂಬೈ(ಮಹಾರಾಷ್ಟ್ರ): ಗೊರೆಗಾಂವ್ ವ್ಯಾಕ್ಸಿನೇಷನ್ ಸೆಂಟರ್ಗೆ ಇಂದು ಜನಸಾಗರವೇ ಹರಿದು ಬಂದಿದೆ. 45 ವರ್ಷಕ್ಕಿಂತ ಮೇಲ್ಪಟ್ಟ ಜನರು ನೆಸ್ಕೊದ ಕೋವಿಡ್ ವ್ಯಾಕ್ಸಿನ್ ಸೆಂಟರ್ಗೆ ಇಂದು ಮುತ್ತಿಕೊಂಡಿದ್ದರು.
ವ್ಯಾಕ್ಸಿನ್ ಪಡೆಯಲು ಉದ್ದನೆಯ ಸರತಿ ಸಾಲುಗಳನ್ನು ಮಾಡಿಕೊಂಡು ಜನರು ಕಾಯುತ್ತಿದ್ದರೆ, ಇನ್ನೂ ಕೆಲವರು ಕೇಂದ್ರಗಳಲ್ಲಿನ ಸ್ವಯಂಸೇವಕರೊಂದಿಗೆ ವಾಗ್ವಾದ ನಡೆಸಿದರು.
ಇಂದು ಈ ಕೇಂದ್ರದಲ್ಲಿ 4500 ಲಸಿಕೆಗಳು ಲಭ್ಯವಿದ್ದು, 3500 ಜನರು ತಮ್ಮ ಸಂಖ್ಯೆಯನ್ನು ಪಡೆಯಲು ಟೋಕನ್ ಪಡೆದಿದ್ದಾರೆ. ಜನರು ನೇರವಾಗಿ ಕೇಂದ್ರಕ್ಕೆ ಬರಬಾರದು, ಸಾಮಾಜಿಕ ಅಂತರ ಕಾಪಾಡಿ ಕೊರೊನಾ ನಿಯಮ ಪಾಲಿಸುವಂತೆ ಡಾ. ನಿಲಂ ಆಂಡ್ರೇಡ್ ಸಲಹೆ ನೀಡಿದರು.