ಚೆನ್ನೈ: ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 46 ರನ್ಗಳ ಗೆಲುವು ದಾಖಲು ಮಾಡಿದ್ದು, ಪ್ಲೇ-ಆಫ್ ಹಂತಕ್ಕೇರಲು ಮತ್ತಷ್ಟು ಹತ್ತಿರವಾಗಿದೆ.
ಇದರ ಮಧ್ಯೆ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಸಿಎಸ್ಕೆ ವಿರುದ್ಧ ಭರ್ಜರಿ 67 ರನ್ ಗಳಿಕೆ ಮಾಡಿರುವ ರೋಹಿತ್, ಈ ತಂಡದ ವಿರುದ್ಧ ಅತಿ ಹೆಚ್ಚು ಅರ್ಧಶತಕ ಸಿಡಿಸಿರುವ ಆಟಗಾರ ಎಂಬ ದಾಖಲೆಗೆ ಭಾಜನರಾಗಿದ್ದಾರೆ. ಸಿಎಸ್ಕೆ ವಿರುದ್ಧ ಒಟ್ಟು 7 ಅರ್ಧಶತಕ ಸಿಡಿಸಿರುವ ರೋಹಿತ್ ಇಷ್ಟೊಂದು ಫಿಫ್ಟಿ ಸಿಡಿಸಿರುವ ಮೊದಲ ಪ್ಲೇಯರ್ ಆಗಿದ್ದಾರೆ. ನಂತರದ ಸ್ಥಾನದಲ್ಲಿ ಶಿಖರ್ ಧವನ್, ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಇದ್ದಾರೆ. ಇವರು ಒಟ್ಟು 6 ಫಿಫ್ಟಿ ಸಿಡಿಸಿದ್ದಾರೆ. ಇನ್ನು ಕಳೆದ ಐದು ಇನ್ನಿಂಗ್ಸ್ಗಳಲ್ಲಿ ಸಿಎಸ್ಕೆ ವಿರುದ್ಧ ಮೂರು ಫಿಫ್ಟಿ ದಾಖಲೆ ಮಾಡಿರುವ ಶ್ರೇಯ ಕೂಡ ರೋಹಿತ್ ಹೆಸರಿಗೆ ದಾಖಲಾಗಿದೆ.
ಉಳಿದಂತೆ ನಿನ್ನೆಯ ಪಂದ್ಯದಲ್ಲಿ ರೋಹಿತ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಭಾರತೀಯರ ಪೈಕಿ ಅತಿ ಹೆಚ್ಚು ಈ ಪ್ರಶಸ್ತಿ ಪಡೆದ ಆಟಗಾರರಾಗಿದ್ದಾರೆ. ಒಟ್ಟು 17 ಸಲ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಉಳಿದಂತೆ ಯೂಸೂಫ್ ಹಾಗೂ ಧೋನಿ 16 ಸಲ, ರೈನಾ 14, ಗಂಭೀರ್ 13 ಸಲ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.