ಮುಂಬೈ: 12ನೇ ಆವೃತ್ತಿಯ ವಿಶ್ವಕಪ್ಗೆ ದಿನಗಣನೆ ಆರಂಭವಾಗಿದ್ದು, ವಿಶ್ವಕಪ್ ಗೆಲ್ಲುವ ತಂಡ ಯಾವುದು, ರನ್ಗಳ ಸುರಿಮಳೆ ಸುರಿಸುವ ಬ್ಯಾಟ್ಸ್ಮನ್, ವಿಕೆಟ್ ಪಡೆಯುವ ಬೌಲರ್ಗಳ ಬಗ್ಗೆ ವಿಶ್ಲೇಷಣೆ ಶುರುವಾಗಿದೆ.
ವಿಶ್ವಕಪ್ಗೂ ಮುನ್ನ ಈ ಭವಿಷ್ಯ, ಅಭಿಪ್ರಾಯ ಹೇಳುವುದು ಸಾಮಾನ್ಯ ಸಂಗತಿ. ಆದರೆ ಒಂದು ತಂಡದ ಬಗ್ಗೆ ಒಲವು ವ್ಯಕ್ತಪಡಿಸುತ್ತಾರೆಂದರೆ ಅದಕ್ಕೆ ಮೂಲ ಕಾರಣ ಆ ತಂಡದ ಆಟಗಾರರು ನೀಡಿರುವ ಪ್ರದರ್ಶನ. ಕಳೆದ 4 ವರ್ಷಗಳಲ್ಲಿ ಏಕದಿನ ಕ್ರಿಕೆಟ್ನಲ್ಲಿ ಅತಿಹೆಚ್ಚು ರನ್ ಗಳಿಸಿರುವ ಟಾಪ್ 5 ಆಟಗಾರರು ಹಾಗೂ ಟಾಪ್ 5 ಬೌಲರ್ಗಳನ್ನು ನಾವು ಕಾದು ನೋಡಬೇಕಿದೆ.
2015 ರ ವಿಶ್ವಕಪ್ ನಂತರ ಏಕದಿನ ಕ್ರಿಕೆಟ್ನಲ್ಲಿ ಹೆಚ್ಚು ರನ್ ಗಳಿಸಿದವರ ಪಟ್ಟಿ
ಆಟಗಾರರ ಹೆಸರು | ರನ್ | ಶತಕ |
ವಿರಾಟ್ ಕೊಹ್ಲಿ | 4306 | 19 |
ರೋಹಿತ್ ಶರ್ಮಾ | 3790 | 14 |
ಜೋ ರೂಟ್ | 3498 | 8 |
ಇಯಾನ್ ಮಾರ್ಗನ್ | 3039 | 6 |
ಕ್ವಿಂಟನ್ ಡಿ ಕಾಕ್ | 2971 | 8 |
ಅತಿ ಹೆಚ್ಚು ವಿಕೆಟ್ ಪಡೆದವರು
ಆಟಗಾರರ ಹೆಸರು | ವಿಕೆಟ್ | ಪಂದ್ಯ |
ಆದಿಲ್ ರಶೀದ್ | 129 | 83 |
ರಶೀದ್ ಖಾನ್ | 125 | 58 |
ಟ್ರೆಂಟ್ ಬೌಲ್ಟ್ | 107 | 54 |
ಕಗಿಸೋ ರಬಾಡಾ | 106 | 59 |
ಇಮ್ರಾನ್ ತಾಹೀರ್ | 92 | 59 |
ಕುಲದೀಪ್ ಯಾದವ್ | 87 | 42 |
ಜಸ್ಪ್ರೀತ್ ಬುಮ್ರಾ | 85 | 49 |