ಲಂಡನ್: 5 ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ವಿಶ್ವಕಪ್ನಲ್ಲಿ ಹೆಚ್ಚು ಶತಕಗಳಿಸಿದ ತಂಡ ಎಂಬ ಹೆಗ್ಗಳಿಕೆಗೆ ಟೀಮ್ ಇಂಡಿಯಾ ಪಾತ್ರವಾಗಿದೆ.
12ನೇ ಆವೃತ್ತಿಯ ವಿಶ್ವಕಪ್ನಲ್ಲಿ 2ನೇ ಪಂದ್ಯವಾಡುತ್ತಿರುವ ಭಾರತ ತಂಡ 50 ಓವರ್ಗಳಲ್ಲಿ 352 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. ಆರಂಭಿಕ ಬ್ಯಾಟ್ಸ್ಮನ್ ಧವನ್ 117, ನಾಯಕ ಕೊಹ್ಲಿ 82, ಉಪನಾಯಕ ರೋಹಿತ್ 57, ಹಾರ್ದಿಕ್ 48, ಧೋನಿ 27 ರನ್ ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.
ಆರಂಭದಿಂದಲೇ ಅಬ್ಬರಿಸಿದ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್ ತಮ್ಮ 17 ನೇ ಏಕದಿನ ಶತಕ ಪೂರ್ಣಗೊಳಿಸಿ ಮಿಂಚಿದರು. ಅಲ್ಲದೆ ಐಸಿಸಿ ಟೂರ್ನಿಗಳಲ್ಲಿ ತಮ್ಮ 6ನೇ ಶತಕ ದಾಖಲಿಸಿ ರಿಕಿ ಪಾಂಟಿಂಗ್, ಕುಮಾರ್ ಸಂಗಕ್ಕಾರ ದಾಖಲೆ ಸರಿಗಟ್ಟಿದರು.
-
Most centuries in World Cup - teamwise:
— Bharath Seervi (@SeerviBharath) June 9, 2019 " class="align-text-top noRightClick twitterSection" data="
27 India
26 Australia
23 Sri Lanka
17 West Indies
15 New Zealand
14 England, Pakistan, South Africa
6 Zimbabwe
5 Ireland
4 Netherlands
3 Bangladesh
1 Canada, Scotland, UAE#IndvWI #CWC19
">Most centuries in World Cup - teamwise:
— Bharath Seervi (@SeerviBharath) June 9, 2019
27 India
26 Australia
23 Sri Lanka
17 West Indies
15 New Zealand
14 England, Pakistan, South Africa
6 Zimbabwe
5 Ireland
4 Netherlands
3 Bangladesh
1 Canada, Scotland, UAE#IndvWI #CWC19Most centuries in World Cup - teamwise:
— Bharath Seervi (@SeerviBharath) June 9, 2019
27 India
26 Australia
23 Sri Lanka
17 West Indies
15 New Zealand
14 England, Pakistan, South Africa
6 Zimbabwe
5 Ireland
4 Netherlands
3 Bangladesh
1 Canada, Scotland, UAE#IndvWI #CWC19
ವಿಶ್ವಕಪ್ನಲ್ಲಿ ಹೆಚ್ಚು ಶತಕಗಳಿಸಿದ ಭಾರತ ತಂಡ:
ಆಡಿರುವ 11 ವಿಶ್ವಕಪ್ನಲ್ಲಿ 5 ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ 26 ಶತಕ ಗಳಿಸಿದರೆ, 2 ಬಾರಿಯ ಚಾಂಪಿಯನ್ ಭಾರತ ತಂಡ 26 ಶತಕಗಳಿಸುವ ಮೂಲಕ ವಿಶ್ವಕಪ್ನಲ್ಲಿ ಅತೀ ಹೆಚ್ಚು ಶತಕಗಳಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ವಿಶ್ವಕಪ್ನಲ್ಲಿ ಅತೀ ಹೆಚ್ಚು ಶತಕಗಳಿಸಿದ ತಂಡಗಳು:
ಭಾರತ 27
ಆಸ್ಟ್ರೇಲಿಯಾ 26
ಶ್ರೀಲಂಕಾ 23
ವೆಸ್ಟ್ ಇಂಡೀಸ್ 17
ನ್ಯೂಜಿಲ್ಯಾಂಡ್ 15
ದ.ಆಫ್ರಿಕಾ/ಪಾಕಿಸ್ತಾನ/ಇಂಗ್ಲೆಂಡ್ ತಲಾ 14