ನವದೆಹಲಿ: 12ನೇ ಆವೃತ್ತಿಯಲ್ಲಿ 3 ನೇ ಸ್ಥಾನದಲ್ಲಿರುವ ಮುಂಬೈ ಹಾಗೂ 2ನೇ ಸ್ಥಾನದಲ್ಲಿರುವ ಡೆಲ್ಲಿ ತಂಡಗಳು ಈ ಆವೃತ್ತಿಯಲ್ಲಿ 2ನೇ ಬಾರಿ ಮುಖಾಮುಖಿಯಾಗುತ್ತಿವೆ.
ಮುಂಬೈ ವಿರುದ್ಧ ಮುಂಬೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಅಬ್ಬರಿಸಿದ್ದ ಪಂತ್ ಡೆಲ್ಲಿ ಗೆಲುವಿಗೆ ಕಾರಣರಾಗಿದ್ದರು. ಇದೀಗ ತಮ್ಮ ನೆಲದಲ್ಲಿಯೇ ಮುಂಬೈ ತಂಡವನ್ನು ಎದುರಿಸುತ್ತಿದ್ದು ಗೆಲ್ಲುವ ಉತ್ಸಾಹದಲ್ಲಿದೆ.
ಡೆಲ್ಲಿ ತಂಡ ಕಳೆದ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿದ್ದು, ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಸಮತೋಲನ ಕಾಯ್ದುಕೊಂಡಿದೆ. ಬ್ಯಾಟಿಂಗ್ನಲ್ಲಿ ಅನುಭವಿ ಧವನ್,ಯುವ ಆಟಗಾರರಾದ ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.
ಬೌಲಿಂಗ್ನಲ್ಲಿ ಆಫ್ರಿಕಾ ಜೋಡಿಗಳಾದ ರಬಡಾ-ಮೋರಿಸ್ ಡೆಲ್ಲಿ ಗೆಲವಿನ ಅಸ್ತ್ರವಾಗಿದ್ದಾರೆ. ಆಲ್ರೌಂಡರ್ ಕೀಮೋ ಪೌಲ್ ಕೂಡ ಫಾರ್ಮ್ನಲ್ಲಿರುವುದು ಡೆಲ್ಲಿಗೆ ಪ್ಲಸ್ ಪಾಯಿಂಟ್ ಆಗಿದೆ.
ಇನ್ನು ಮುಂಬೈ ತಂಡ ಕೂಡ 10 ಪಾಯಿಂಟ್ ಗಳಿಸಿ 3 ನೇಸ್ಥಾನದಲ್ಲಿದೆ. ಡೆಲ್ಲಿಯಂತೆ ಇಲ್ಲೂ ಕೂಡ ವಿಶ್ವದರ್ಜೆಯ ಬೌಲರ್ಗಳಾದ ಬೆಹ್ರನ್ಡ್ರಾಫ್,ಬುಮ್ರಾ ಹಾಗೂ ಮಲಿಂಗಾ ಅತ್ಯುತ್ತಮ ಪ್ರದರ್ಶನ ತೋರಿತ್ತಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ರೋಹಿತ್ ಶರ್ಮಾ,ಡಿಕಾಕ್,ಪೊಲಾರ್ಡ್ ಹಾಗೂ ಗೇಮ್ ಚೇಂಜರ್ ಹಾರ್ದಿಕ್ ಪಾಂಡ್ಯ ಮುಂಬೈ ತಂಡದ ಬಲವಾಗಿದ್ದಾರೆ.
ಮುಂಬೈ-ಡೆಲ್ಲಿ ಮುಖಾಮುಖಿ
ಎರಡು ತಂಡಗಳು 23 ಬಾರಿ ಮುಖಾಮುಖಿಯಾಗಿದ್ದು, ಡೆಲ್ಲಿ 12ರಲ್ಲಿ ಮುಂಬೈ 11 ರಲ್ಲಿ ಜಯ ಸಾಧಿಸಿದೆ. ಡೆಲ್ಲಿಯಲ್ಲಿ ನಡೆದಿರುವ 9 ಪಂದ್ಯಗಳಲ್ಲಿ ಡೆಲ್ಲಿ 6 ಮುಂಬೈ 3 ರಲ್ಲಿ ಜಯ ಸಾಧಿಸಿದೆ.
ಅತಿ ಹೆಚ್ಚು ರನ್ಗಳಿಸಿರುವ ಬ್ಯಾಟ್ಸ್ಮನ್ಗಳು
ರಿಷಭ್ ಪಂತ್ 212(ಡೆಲ್ಲಿ)
ರೋಹಿತ್ ಶರ್ಮಾ 530 (ಮುಂಬೈ)
ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳು
ಅಮಿತ್ ಮಿಶ್ರಾ 14(ಡೆಲ್ಲಿ)
ಲಿಸಿತ್ ಮಲಿಂಗಾ 21 (ಮುಂಬೈ)
ಸಂಭಾವ್ಯ ತಂಡ:
ಡೆಲ್ಲಿ ಕ್ಯಾಪಿಟಲ್ :ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್(ನಾಯಕ), ರಿಷಬ್ ಪಂತ್, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ, ಕ್ರಿಸ್ ಮೋರಿಸ್, ಕಾಗಿಸೋ ರಬಾಡ, ಮನ್ರೊ, ಇಶಾಂತ್ ಶರ್ಮಾ, ಕೀಮೋ ಪೌಲ್
ಮುಂಬೈ ಇಂಡಿಯನ್ಸ್ :ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾಧವ್, ಇಶಾನ್ ಕಿಶನ್, ಕೀರನ್ ಪೊಲ್ಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಮಲಿಂಗಾ, ರಾಹುಲ್ ಚಹಾರ್, ಬುಮ್ರಾ, ಬೆಹ್ರನ್ಡ್ರಾಫ್