ETV Bharat / briefs

ಭೂತಕ್ಕೆ ಬೆಂಕಿ ಕಟ್ಟಿದ ವಿಶ್ವಸಂಸ್ಥೆ... ಮಾನವ ಕುಲಕ್ಕೇ ವೈರಿ ಮಸೂದ್‌ ಅಜರ್‌ಗೆ ಟೈಮ್ ಬಾಂಬ್!

author img

By

Published : May 1, 2019, 11:44 PM IST

ಮುಂಬೈ 26/11 ದಾಳಿಯ 11 ವರ್ಷದಲ್ಲಿ ಬಳಿಕ ಭಾರತ ನಾಲ್ಕಕ್ಕೂ ಹೆಚ್ಚು ಸಾರಿ ಈತನನ್ನ ಜಾಗತಿಕ ಉಗ್ರನೆಂಬ ಘೋಷಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿ ಒತ್ತಡ ಹೇರುತ್ತಲೇ ಇತ್ತು.

ಮಸೂದ್‌ ಅಜರ್‌

ಹೈದರಾಬಾದ್​: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಬಹುದೊಡ್ಡ ಜಯ ಧಕ್ಕಿದೆ. ಮುಂಬೈ 26/11, ಉರಿ ಮತ್ತು ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಮಸೂದ್‌ ಅಜರ್‌ಗಿದು ಅವನತಿ ಸನ್ನಿಹಿತವಾಗಿದೆ.

ಮುಂಬೈ ಟೆರರ್​ ಅಟ್ಯಾಕ್​ ಹಾಗೂ ಪುಲ್ವಾಮಾ ದಾಳಿಯ ಮಾಸ್ಟರ್​ ಮೈಂಡ್​ ಮಸೂದ್ ಅಜರ್‌ನ ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಘೋಷಿಸಿದೆ. ಇದರಿಂದ ನೀಚನನ್ನೇ ಈವರೆಗೂ ಸಾಕಿ ಸಲುಹಿದ್ದ ನೆರೆಯ ವೈರಿ ರಾಷ್ಟ್ರ ಪಾಕಿಸ್ತಾನಕ್ಕಂತೂ ದೊಡ್ಡ ಮುಖಭಂಗವಾಗಿದೆ.

ಮಾನವ ಕುಲಕ್ಕೇ ವೈರಿ ಮಸೂದ್‌ ಅಜರ್‌ಗೆ ಟೈಮ್ ಬಾಂಬ್!

ಭಾರತದ ಪ್ರಸ್ತಾವಕ್ಕೆ ಪದೇಪದೆ ಅಡ್ಡಗಾಲು ಹಾಕಿದ್ದ ಚೀನಾ!
ಮುಂಬೈ 26/11 ದಾಳಿಯ 11 ವರ್ಷದಲ್ಲಿ ಬಳಿಕ ಭಾರತ ನಾಲ್ಕಕ್ಕೂ ಹೆಚ್ಚು ಸಾರಿ ಈತನನ್ನ ಜಾಗತಿಕ ಉಗ್ರನೆಂಬ ಘೋಷಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿ ಒತ್ತಡ ಹೇರುತ್ತಲೇ ಇತ್ತು. ಆದರೆ, ಭಾರತದ ಈ ಪ್ರಯತ್ನಕ್ಕೆ ಚೀನಾ ಪದೇಪದೆ ಅಡ್ಡಗಾಲು ಹಾಕ್ತಾ ತನ್ನ ವೀಟೋ ಅಸ್ತ್ರ ಬಳಸುತ್ತಲಿತ್ತು. 2008ರಲ್ಲಿ ಮುಂಬೈ ದಾಳಿ ವೇಳೆ ಆಗಿನ ಡಾ. ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ, ಎರಡು ಸಲ ಅಜರ್‌​ನನ್ನ ಜಾಗತಿಕ ಉಗ್ರ ಹಣೆಪಟ್ಟಿ ಸೇರಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಪ್ರಸ್ತಾವ ಮುಂದಿಟ್ಟಿತ್ತು. ಡ್ರ್ಯಾಗನ್‌ ಇದಕ್ಕೆ ತೊಡರುಗಾಲು ಹಾಕುತ್ತಲೇ ಬಂದಿತ್ತು.

ಭಾರತದ ಪರ ಗಟ್ಟಿಯಾಗಿ ನಿಂತ ಫ್ರಾನ್ಸ್‌, ಅಮೆರಿಕ, ಬ್ರಿಟನ್‌!
ಇದೇ ವರ್ಷ ಫೆಬ್ರವರಿ 14 ರಂದು ಪುಲ್ವಾಮಾ ಉಗ್ರರ ದಾಳಿ ಬಳಿಕ ಭಾರತ ಮಸೂದ್‌ ಅಜರ್‌ಗೆ ಒಂದು ಗತಿ ಕಾಣಿಸಲು ನಿರ್ಧರಿಸಿಬಿಟ್ಟಿತ್ತು. ಭಾರತದ ಈ ನಡೆಗೆ ಜಾಗತಿಕ ಸಮುದಾಯ ಸಾಥ್‌ ನೀಡಿತ್ತು. ಫ್ರಾನ್ಸ್‌, ಅಮೆರಿಕ, ಬ್ರಿಟನ್‌ ಕೂಡ ಭಾರತದ ಬೆನ್ನಿಗೆ ನಿಂತವು. ಆದರೆ, ವಿಶ್ವ ಸಂಸ್ಥೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳುವಾಗ ಅದಕ್ಕೆ ಚೀನಾ ಕೂಡ ಬೆಂಬಲಿಸಬೇಕಿತ್ತು. ಚೀನಾ ಹಾಗೇ ಮಾಡಲಿಲ್ಲ. ಅಜರ್‌ ವಿರುದ್ಧ ಸಾಕ್ಷ್ಯಗಳನ್ನ ಭಾರತ ಒದಗಿಸಿತ್ತು. ಇಷ್ಟಿದ್ದರೂ ಮಾರ್ಚ್‌ 13ರಂದು ಚೀನಾ ಆ ಬಗ್ಗೆ ಪರಿಶೀಲಿಸೋದಾಗಿ ಹೇಳಿತ್ತು. ಚೀನಾದ ಈ ಎಡಬಿಡಂಗಿ ನಡೆಗೆ ವಿಟೋ ರಾಷ್ಟ್ರಗಳು ಕೆರಳಿ ಕೆಂಡವಾಗಿದ್ದವು. ಜವಾಬ್ದಾರಿಯುತ ಸ್ಥಾನದಲ್ಲಿರುವ ಚೀನಾ ತನ್ನ ನಿಲುವು ಬದಲಿಸದಿದ್ದರೆ ಅಜರ್‌ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದವು. ಮೇ 1ರೊಳಗೆ ನಿರ್ಧಾರ ಕೈಗೊಳ್ಳಿ ಇಲ್ಲದಿದ್ದರೆ ಪರಿಣಾಮ ಎದುರಿಸಿ ಅಂತಾ ವೀಟೋ ರಾಷ್ಟ್ರಗಳು ಚೀನಾಗೆ ವಾರ್ನ್‌ ಮಾಡಿದ್ದವು.

ಕೊನೆಗೂ ಚೀನಾ ಹಾಗೂ ಪಾಕ್ ಈಗ ವಿಶ್ವಸಂಸ್ಥೆಯಲ್ಲಿ ಮಂಡಿಯೂರಿವೆ. ಮಾನವ ಕುಲಕ್ಕೆ ವೈರಿಯಾಗಿದ್ದ ಮೌಲಾನಾ ಮಸೂದ್‌ ಅಜರ್‌ಗೆ ಜಾಗತಿಕ ಉಗ್ರನೆಂಬ ಹಣೆಪಟ್ಟಿ ಕಟ್ಟಲಾಗಿದೆ. ಭಾರತ ವಿಶ್ವಮಟ್ಟದಲ್ಲಿ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡಂತಾಗಿದೆ.

Intro:Body:

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.