ETV Bharat / briefs

Malayalam actor Unni Dev: ಪತ್ನಿ ಆತ್ಮಹತ್ಯೆ ಪ್ರಕರಣದಲ್ಲಿ ನಟ ಉನ್ನಿದೇವ್​ಗೆ ನ್ಯಾಯಾಂಗ ಬಂಧನ - ನಟ ಉನ್ನಿದೇವ್

ಪತ್ನಿ ಪ್ರಿಯಾಂಕಾ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಗಂಭೀರ ಆರೋಪದಲ್ಲಿ ಬಂಧನಕ್ಕೊಳಗಾದ ಮಲಯಾಳಂ ಚಿತ್ರನಟ ಉನ್ನಿದೇವ್ ಅವರಿಗೆ ಕೇರಳದ ಸ್ಥಳೀಯ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Malayalam actor unnidev
ಪತ್ನಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ನಟ ಉನ್ನಿದೇವ್​ಗೆ 14 ದಿನಗಳ ನ್ಯಾಯಾಂಗ ಬಂಧನ
author img

By

Published : May 27, 2021, 9:18 AM IST

ತಿರುವನಂತಪುರ: ಮಲಯಾಳಂ ಚಿತ್ರನಟ ಉನ್ನಿದೇವ್ ಅವರನ್ನು ಪತ್ನಿ ಸಾವಿನ ಪ್ರಕರಣದಲ್ಲಿ ಬಂಧಿಸಲಾಗಿದೆ. ಪತ್ನಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನ್ಯಾಯಾಲಯ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಿಯಾಂಕಾ ಮೇ 12 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಈ ಹಿನ್ನೆಲೆಯಲ್ಲಿ ಉನ್ನಿದೇವ್ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದರು. ಇದಕ್ಕೆ ಒಂದು ದಿನದ ಮುಂಚಿತವಾಗಿ ಆಕೆ ಗಂಡನ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಆದರೆ ಮರುದಿನ ಸಾವಿಗೆ ಶರಣಾಗಿದ್ದರು. ಕೆಲವು ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಉನ್ನಿದೇವ್, ಪತ್ನಿಯ ಮೇಲೆ ದೌರ್ಜನ್ಯ ಎಸಗುತ್ತಿದ್ದ ಆರೋಪ ಎದುರಿಸುತ್ತಿದ್ದಾರೆ.

ನೆಡುಮಂಗಡ್ ಪೊಲೀಸರ ತಂಡ ಮಂಗಳವಾರ ಎರ್ನಾಕುಲಂ ಜಿಲ್ಲೆಯ ಅವರ ಮನೆಗೆ ತೆರಳಿ, ಉನ್ನಿದೇವ್​ ಅವರ ಕೊರೊನಾ ಟೆಸ್ಟ್​ ನಡೆಸಿದೆ. ಬಳಿಕ ನೆಗೆಟಿವ್​ ವರದಿ ಬಂದಿದ್ದು, ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಉನ್ನಿದೇವ್‌ ದಿವಂಗತ ನಟ ರಾಜನ್ ಪಿ.ದೇವ್ ಅವರ ಪುತ್ರ. ಮೃತಪಟ್ಟ ಪ್ರಿಯಾಂಕಾ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದರು ಎಂಬ ಮಾಹಿತಿ ದೊರೆತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.