ನವದೆಹಲಿ: ಮೋದಿ ಬಯೋಪಿಕ್ ಬಿಡುಗಡೆಗೆ ಚುನಾವಣೆ ಆಯೋಗ ನೀಡಿರುವ ತಡೆಯನ್ನು ಪ್ರಶ್ನಿಸಿ ಸಿನಿಮಾ ತಂಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಈ ಮೊದಲು ತಡೆಯಾಜ್ಞೆ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ರಿಲೀಸ್ ವಿಚಾರವನ್ನು ಚುನಾವಣಾ ಆಯೋಗ ನಿರ್ಧರಿಸಲಿದೆ ಎಂದು ವಿವಾದವನ್ನು ಆಯೋಗಕ್ಕೆ ಹಸ್ತಾಂತರಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಆಯೋಗ, ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಯಾವುದೇ ಬಯೋಪಿಕ್ ರಿಲೀಸ್ ಮಾಡುವಂತಿಲ್ಲ ಎಂದಿತ್ತು.
-
Makers of biopic 'PM Narendra Modi' move the Supreme Court against the stalling of the film's release. Supreme Court agrees to hear the case on April 15. pic.twitter.com/QWh6CnPOlb
— ANI (@ANI) April 12, 2019 " class="align-text-top noRightClick twitterSection" data="
">Makers of biopic 'PM Narendra Modi' move the Supreme Court against the stalling of the film's release. Supreme Court agrees to hear the case on April 15. pic.twitter.com/QWh6CnPOlb
— ANI (@ANI) April 12, 2019Makers of biopic 'PM Narendra Modi' move the Supreme Court against the stalling of the film's release. Supreme Court agrees to hear the case on April 15. pic.twitter.com/QWh6CnPOlb
— ANI (@ANI) April 12, 2019
ಸದ್ಯ ಆಯೋಗದ ಈ ನಿರ್ಧಾರವನ್ನು ಮೋದಿ ಬಯೋಪಿಕ್ ತಂಡ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಚಿತ್ರತಂಡ ಅರ್ಜಿಯನ್ನು ಪರಿಗಣಿಸಿರು ಕೋರ್ಟ್ ಏಪ್ರಿಲ್ 15ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ.
ವಿವೇಕ್ ಒಬೇರಾಯ್ ನಟಿಸಿರುವ ಮೋದಿ ಬಯೋಪಿಕ್ ಸಿನಿಮಾವನ್ನು ಒಮಂಗ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಏಪ್ರಿಲ್ 11ರಂದು ಬಿಡುಗಡೆಯಾಗಬೇಕಿತ್ತು.